ಕೋಟ: ಕೋಡಿ ಪಂಚಾಯತ್ ವ್ಯಾಪ್ತಿಯ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

Views: 25
ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಬಹುದಿನಗಳ ವಿವಿಧ ಸಮಸ್ಯೆಗಳಾದ ಕೃಷಿಭೂಮಿಗೆ ಸಾಕಷ್ಟು ವರ್ಷಗಳಿಂದ ಉಪು ನೀರು ನುಗ್ಗುತ್ತಿದ್ದು ಇದಕ್ಕೆ ಶಾಶ್ವತ ತಡೆಗೋಡೆ ನಿರ್ಮಿಸಬೇಕು, ಸಾಸ್ತಾನದಿಂದ ಕೋಡಿ ಸಂಪರ್ಕಿಸುವ ರಸ್ತೆ ಅಗಲಿಕರಣ ಆಗಬೇಕು.ಕೋಡಿ ಮಹಾಸತೀಶ್ಚರಿ ದೇಗುಲ ಎದುರು ಇರುವ ಬೀಚ್ ರಸ್ತೆ ಅಭಿವೃದ್ಧಿಗೊಳಿಸುವುದು.ಸ್ಥಳೀಯ ಎರಡು ಕೊಳ ಹೂಳೆತ್ತೂವುದು, ಕೋಡಿ ತಲೆಯಲ್ಲಿ ಸ್ಮಶಾನ ಆಗಬೇಕು, ಸಿಆರ್ ಝಡ್ ಸಮಸ್ಯೆಯಡಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ, ಕೋಡಿ ಬಂದರು ಸಮಗ್ರ ಅಭಿವೃದ್ಧಿ ಪಡಿಸುವ ಕುರಿತು ಅಹವಾಲುಗಳನ್ನು ಸಭೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಮಹಾಬಲ ತಿಂಗಳಾಯ ಜನತೆಯ ಪರವಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು.
ಸಮಸ್ಯೆಗಳನ್ನು ಆಲಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರದ ಮಟ್ಟದಲ್ಲಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಅಲ್ಲದೆ ತಾತ್ಕಾಲಿಕ ಕೆಲ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳವ ಬಗ್ಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ,ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್.ಕೋಡಿ, ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಪ್ರಭಾಕರ್ ಮೆಂಡನ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಸುಧೀರ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು.