ಇತರೆ
ಕೋಟೇಶ್ವರದ ಕಾಗೇರಿಯಲ್ಲಿ ಜೊತೆಗಾರನಿಂದಲೇ ಚೂರಿ ಇರಿತ

Views: 201
ಕುಂದಾಪುರ:ಅಡುಗೆ ವಿಚಾರದಲ್ಲಿ ತಕರಾರು ನಡೆದು ಜೊತೆಗಾರನಿಗೆ ಚೂರಿಯಿಂದ ಎದೆಗೆ ತಿವಿದ ಘಟನೆ ಕೋಟೇಶ್ವರದ ಕಾಗೇರಿಯಲ್ಲಿ ನಡೆದಿದೆ.
ಇರಿತಕ್ಕೊಳಗಾದ ವ್ಯಕ್ತಿ ಕೂಲಿ ಕಾರ್ಮಿಕ ಮೊಹಮ್ಮದ್ (31) ಅವರು ಕೋಟೇಶ್ವರ ಗ್ರಾಮದ ಕಾಗೇರಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಇವರ ಜೊತೆಯಲ್ಲಿ ಪಿಂಟು ಕುಮಾರ್ ಹಾಗೂ ಸೂರಜ್ ಕೂಡ ವಾಸವಿದ್ದರು.ಪಿಂಟು ಕುಮಾರ್ ಅಡುಗೆ ವಿಷಯದಲ್ಲಿ ತಕರಾರು ತೆಗೆದು ಚೂರಿಯಿಂದ ಎದೆಗೆ ತಿವಿದಿದ್ದು ಬೊಬ್ಬೆ ಹಾಕಿದಾಗ ಸೂರಜ್ ಓಡಿ ಹೋಗಿದ್ದಾನೆ.
ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.