ಧಾರ್ಮಿಕ

ಕೊಲ್ಲೂರು,ಮಂದಾರ್ತಿ,ಕಟೀಲು ದೇವರ ದರ್ಶನಕ್ಕೆ ವಸ್ತ್ರ ಸಂಹಿತೆ? 

Views: 182

ಬೆಂಗಳೂರು: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೆ ತರಲು ಧಾರ್ಮಿಕ ಸಂಸ್ಥೆಗಳ ಮಹಾಸಂಘದವರು ಈ ಹಿಂದೆ ಒತ್ತಾಯಿಸಿದ್ದರು. ರಾಜ್ಯ ಮುಜರಾಯಿ ಇಲಾಖೆ ಈ ಬಗ್ಗೆ  ಚಿಂತನೆ ನಡೆಸಿದೆ.ಈ ಸಂಬಂಧ ಆಗಮ ಪಂಡಿತರ ಸಲಹೆ ಪಡೆದು ಜಾರಿಗೆ ತರಲು ನಿರ್ಧರಿಸಿದೆ.

ಭಕ್ತರು ಸಭ್ಯ ಉಡುಪು ಧರಿಸಿರಬೇಕು. ಇದರಿಂದ ಇತರೆ ಭಕ್ತರು ದೇವಾಲಯಗಳಲ್ಲಿ ದೇವರ ಕುರಿತು ಧ್ಯಾನಿಸಲು ಮತ್ತು ಭಕ್ತಿಯ ಮೊರೆ ಹೋಗಲು ನೆರವಾಗುತ್ತದೆ. ಇಲ್ಲದಿದ್ದರೆ ಮನಸ್ಸಿನ  ಶಾಂತಿ, ಶಿಸ್ತು, ಏಕಾಗ್ರತೆಗೆ ಭಂಗ ಉಂಟು ಮಾಡುತ್ತದೆ ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ.

ದೇವಾಲಯಕ್ಕೆ ಬರುವ ಭಕ್ತರು ಸಭ್ಯ ಉಡುಪು ಧರಿಸಿದರೆ ಇಡೀ ಆವರಣದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗಿ ಹೆಚ್ಚಿಸುತ್ತದೆ.

ಸಭ್ಯ ಉಡುಪು ಯಾವುದು?

ಮಹಿಳೆಯರು, ಯುವತಿಯರು ಸೀರೆ, ಚೂಡಿದಾರ್‌ ಅಂತಹ ಉಡುಪು ಧರಿಸಿದರೆ, ಪುರುಷರು ಪ್ಯಾಂಟ್‌- ಶರ್ಟ್‌, ಪಂಚೆ-ಶರ್ಟ್‌, ಧೋತಿ

ನಿಷೇಧಿತ ಉಡುಪು ಯಾವುದು?

ಮಹಿಳೆಯರು ಜೀನ್ಸ್‌ ಪ್ಯಾಂಟ್‌, ಟೀ ಶರ್ಟ್‌, ಮಿಡಿ ಇತ್ಯಾದಿ ಉಡುಪು ಧರಿಸುವುದನ್ನು ನಿಷೇಧಿಸಲಾಗುವುದು. ಅದೇ ರೀತಿ ಪುರುಷರು ಬರ್ಮುಡಾ ಧರಿಸಿ ಬರುವುದನ್ನು ನಿಷೇಧಿಸಲಾಗುವುದು.

ಕೊಲ್ಲೂರು ಮೂಕಾಂಬಿಕೆ, ತಾಯಿ ಚಾಮುಂಡೇಶ್ವರಿ ಮತ್ತಿತರ ದೇವಾಲಯಗಳಿಗೆ ವಿಶೇಷ ಸಂದರ್ಭಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ವಿದೇಶಿಗರು ಅಥವಾ ಭಾರತೀಯರು ಸಭ್ಯವಲ್ಲದ ಪಾಶ್ಚಾತ್ಯ ದಿರಿಸು ಧರಿಸಿ ಬಂದಾಗ ಇತರರಿಗೆ ಒಂದು ರೀತಿ ಮುಜುಗರವಾಗುತ್ತದೆ. ಇದು ನಮ್ಮ ಪರಂಪರೆ ಮತ್ತು ದೇವಸ್ಥಾನದ ಸಂಸ್ಕೃತಿಯ ರಕ್ಷಣೆ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ, ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದರೆ, ಖಾಸಗಿ ಒಡೆತನದ ದೇವಾಲಯಗಳಲ್ಲೂ ಇದು ಜಾರಿಗೆ ತರಬೇಕು ಎಂಬುದು ಕೆಲವು ಸಂಘಟನೆಗಳ ಒತ್ತಾಯವಾಗಿದೆ.

ಯಾವ್ಯಾವ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ

ಕಟೀಲು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆ, ಎಡೆಯೂರು ಸಿದ್ದಲಿಂಗೇಶ್ವರ, ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ, ಮಂದಾರ್ತಿಯ ದುರ್ಗಾಪರಮೇಶ್ವರಿ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ, ಬೆಂಗಳೂರಿನ ಬನಶಂಕರಿ, ಬಸವನಗುಡಿಯ ದೊಡ್ಡಗಣಪತಿ ಇತರ ದೇವಾಲಯಗಳು.

ಸರಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದರೆ, ಖಾಸಗಿ ಒಡೆತನದ ದೇವಾಲಯಗಳಲ್ಲೂ ಇದು ಜಾರಿಗೆ ಬರುತ್ತದೆ. ಇದರಿಂದ ಭಾರತೀಯ ಪರಂಪರೆ ಮತ್ತು ದೇವಸ್ಥಾನದ ಸಂಸ್ಕೃತಿಯ ರಕ್ಷಣೆ ದೃಷ್ಟಿಯಿಂದ ಜರೂರಾಗಿ ಆಗಬೇಕು. ಈ ಕುರಿತು ಈಗಾಗಲೇ ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಕೂಡ ಚರ್ಚೆಯಾಗಿದೆ. ಈ ನೀತಿ ಜಾರಿಗೆ ತರುವಂತೆ ಸಚಿವರಲ್ಲಿ ಮತ್ತೊಮ್ಮೆ ಒತ್ತಾಯಿಸಲಾಗುವುದು ಎಂದು ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಮೋಹನ್‌ಗೌಡ ಹೇಳಿದ್ದಾರೆ.

 

Related Articles

Back to top button