ಕೊನೆಗೂ ಕರಿಮಣಿ ಮಾಲೀಕ ಕೈಗೆ ಸಿಕ್ಕ..ಯಾರಿವರು..?!

Views: 210
ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದ್ರೂ ಕರಿಮಣಿ ಮಾಲೀಕ ಹಾಡಿನ ರೀಲ್ಸ್, ವಿಡಿಯೋಗಳು ವೈರಲ್ ಆಗುತ್ತಲೇ ಇದೆ. ಈ ಹಿಂದೆ ನಾನು ನಂದಿನಿ ಬೆಂಗಳೂರಿಗ್ ಬಂದೀನಿ ರೀಲ್ಸ್ ಮೂಲಕ ವೈರಲ್ ಆಗಿದ್ದ ವಿಕಿಪೀಡಿಯಾ ಅವರ ಮತ್ತೊಂದು ರೀಲ್ಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರಿಮಣಿ ಮಾಲೀಕ ಯಾರು ಅನ್ನೋ ಪ್ರಶ್ನೆಗೆ ಇಲ್ಲಿ ನಂದಿನಿ ಉತ್ತರಿಸಿದ್ದಾರೆ. ಈ ಹಾಡಿನಲ್ಲಿ ಕರಿಮಣಿ ಮಾಲೀಕ ಯಾರು ಎಂದು ಇಬ್ಬರು ಕುಳಿತುಕೊಂಡು ನಂದಿನಿಗೆ ಪ್ರಶ್ನಿಸುತ್ತಾರೆ. ಆಗ ನಂದಿನಿ ನೀನಲ್ಲ ನೀನಲ್ಲಾ.. ರಾವುಲ್ಲಾ..ರಾವುಲ್ಲಾ..ಕರಿಮಣಿ ಮಾಲೀಕ ರಾವುಲ್ಲಾ ಎಂದು ಹೇಳಿದ್ದಾರೆ.
ರಾವುಲ್ಲಾ ಅನ್ನೋ ಹೆಸರು ಬೆಳ್ಳುಳ್ಳಿ ಕಬಾಬ್ ಅಡುಗೆ ವಿಡಿಯೋದಿಂದ ಫೇಮಸ್ ಆಗಿದ್ದು, ಇದೀಗ ಕರಿಮಣಿ ಮಾಲೀಕ ಅವರ ವಿಕಿಪೀಡಿಯಾ ರೀಲ್ನಲ್ಲೂ ಬಳಸಿರೋದು ಜನರಲ್ಲಿ ಮತ್ತಷ್ಟು ನಗೆ ಹನಿಯನ್ನ ಮೂಡಿಸಿದೆ.
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದ್ದು, ನೆಟ್ಟಿಗರು ಕೊನೆಗೂ ಕರಿಮಣಿ ಮಾಲೀಕ ಯಾರು ಅನ್ನೋದು ಗೊತ್ತಾಯ್ತು, ಇದು ರಾಜ್ಯವೇ ಖುಷಿ ಪಡುವ ಸದ್ದಿ ಎಂದು ಕಾಮೆಂಟ್ ಮಾಡಿದ್ರೆ ಇನ್ನು ಹಲವರು ಕ್ಲೈಮ್ಯಾಕ್ಸ್ ಟ್ವಿಸ್ಟ್ ಸೂಪರ್ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
ಕರಿಮಣಿ ಮಾಲೀಕ ಟ್ರೆಂಡಿಂಗ್ ಬ್ರೇಕ್ ಮಾಡಿದ ನಮ್ಮ ರಾಹುಲ್ಲ ಎಂದು ಇನ್ನೂ ಹಲವರು ಕಾಮೆಂಟ್ ಮಾಡಿದ್ರೆ, ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.