ಸಾಮಾಜಿಕ

ಕೊಡಗಿನಲ್ಲಿ ಪತ್ನಿ, ಅತ್ತೆ, ಮಾವ ಸೇರಿ ನಾಲ್ವರ ಭೀಕರ ಹತ್ಯೆಗೈದ ಅಳಿಯ, ಅಕ್ರಮ ಸಂಬಂಧ ಶಂಕೆ!

Views: 140

ಕನ್ನಡ ಕರಾವಳಿ ಸುದ್ದಿ: ಕೊಡಗು ಜಿಲ್ಲೆಯಲ್ಲಿ ಭೀಕರ ಹತ್ಯಾಕಾಂಡ ನಡೆದಿದೆ.ಪತ್ನಿಗೆ ಅಕ್ರಮ ಸಂಬಂಧ ಶಂಕೆಯಿಂದ ವ್ಯಕ್ತಿಯೊಬ್ಬ ಪತ್ನಿ ಸೇರಿ ನಾಲ್ವರನ್ನು ಬರ್ಬರವಾಗಿ ಹತ್ಯೆಯಾಗಿದೆ.

ಕೊಡಗು ಪೊನ್ನಂಪೇಟೆ ತಾಲೂಕಿನ ಕುಳುತೋಡು ಗ್ರಾಮದ ಕರಿಯ (75), ಗೌರಿ (70), ನಾಗಿ (35) ಹಾಗೂ 8 ವರ್ಷದ ಕಾವೇರಿಯನ್ನು ಕತ್ತಿಯಿಂದ ಹಲ್ಲೆಗೈದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಗಿರೀಶ್ (35) ಆರೋಪಿಯಾಗಿದ್ದು, ಈತ ಸದ್ಯ ನಾಪತ್ತೆಯಾದ್ದಾನೆ.

ಏಳು ವರ್ಷಗಳ ಹಿಂದೆ ಗಿರೀಶ್ ಹಾಗೂ ನಾಗಿ ವಿವಾಹವಾಗಿದ್ದು, ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಸರಣಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ನಾಗಿಯೊಂದಿಗೆ ಗಿರೀಶ್ ಮೂರನೇ ಮದುವೆಯಾಗಿ ತೋಟದ ಮನೆಯಲ್ಲೇ ಜೀವನ ನಡೆಸುತ್ತಿದ್ದ. ಇನ್ನೂ ಕಾಫಿ ಬೀಜ ಮಾರಾಟ ಮಾಡಿದ ಹಣದ ವಿಚಾರಕ್ಕಾಗಿ ನಾಲ್ವರ ನಡುವೆ ಗಲಾಟೆ ನಡೆಯುತ್ತಿತ್ತು. ಅಲ್ಲದೇ ಅನೈತಿಕ ಸಂಬಂಧದ ಹಿನ್ನೆಲೆಯಲ್ಲೂ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Back to top button