ಇತರೆ

ಕೇಸರಿ ಧ್ವಜಕ್ಕೆ ಅವಮಾನಿಸಿದ ಯುವಕನಿಗೆ ಥಳಿಸಿ, ಬೆತ್ತಲೆ ಮೆರವಣಿಗೆ

Views: 98

ಕೇಸರಿ ಧ್ವಜವನ್ನು ಅವಮಾನಿಸಿದ ಆರೋಪದಲ್ಲಿ  ಯುವಕನಿಗೆ ಥಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ ಆತನ ಖಾಸಗಿ ಅಂಗಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ ಅಮಾನವೀಯ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಮೇದಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ.  ಯುವಕ ಕೇಸರಿ ಧ್ವಜವನ್ನು ಅವನ ಪ್ಯಾಂಟ್‌ನೊಳಗೆ ತುರುಕಿಸಿಕೊಳ್ಳುವ ವಿಡಿಯೋ ರೀಲ್ಸ್‌ ವೈರಲ್‌ ಆಗಿತ್ತು. ರೀಲ್ಸ್‌ನಿಂದ ಕೋಪಗೊಂಡ ಜನರು ಮೇದಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಯುವಕನನ್ನು ಥಳಿಸಿದ್ದಾರೆ.

ವೈರಲ್‌ ಆಗಿರುವ ಕೆಲವು ವೀಡಿಯೋಗಳಲ್ಲಿ ದುಷ್ಕರ್ಮಿಗಳ ಗುಂಪು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಯುವಕನನ್ನು ಥಳಿಸುತ್ತಿರುವುದು ಮತ್ತು ಆತನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಅವನ ಖಾಸಗಿ ಅಂಗಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವುದನ್ನು ಕಂಡು ಬಂದಿದೆ.

ಇದಲ್ಲದೆ ಥಳಿತಕ್ಕೊಳಗಾಗಿರುವ ಸಂತ್ರಸ್ತ ಯುವಕನ ವಿರುದ್ಧ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿದೆ. ಆತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 153(ಎ), 295-ಎ, 505(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಸಂತ್ರಸ್ತ ಮುಸ್ಲಿಂ ಯುವಕ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 323, 505(2), ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ತನಿಖೆಯನ್ನು ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Related Articles

Back to top button