ಕೃತಕ ವಾತಾವರಣ ಸೃಷ್ಟಿಸಿ ಬಾಡಿಗೆ ಮನೆಯಲ್ಲಿ ಗಾಂಜಾ ಬೆಳೆದ ವೈದ್ಯ ವಿದ್ಯಾರ್ಥಿಗಳು : ಐವರ ಬಂಧನ

Views: 0
ಶಿವಮೊಗ್ಗ : ಗುರುಪುರದ ಶಿವಗಂಗಾ ಲೇಔಟ್ ನ ಮನೆಯೊಂದರ ಕೊಠಡಿಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಕೃತಕ ವಾತಾವರಣ ಸೃಷ್ಟಿಸಿ ಗಾಂಜಾ ಬೆಳೆದು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ತಮಿಳುನಾಡಿನ ವಿಘ್ನರಾಜ್ (28) ಕೇರಳದ ವಿನೋದ್ ಕುಮಾರ್ (27) ವಿಜಯಪುರದ ಅಬ್ದುಲ್ ಖಯ್ಯುಮ್ (25) ವಿಜಯನಗರ ಜಿಲ್ಲೆಯ ಅರ್ಪಿತ (24 ) ಬಂಧಿತರು.
ಗಾಂಜಾ ಮಾರಾಟದ ಕುರಿತು ದೊರೆತ ಮಾಹಿತಿಯಂತೆ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು ವಿದ್ಯಾರ್ಥಿಗಳು ವಾಸವಾಗಿದ್ದ ಬಾಡಿಗೆ ಮನೆಗೆ ದಾಳಿ ನಡೆಸಿದ್ದಾರೆ. ಮನೆಯಲ್ಲಿ ವಾಸವಾಗಿದ್ದ ಕೊಠಡಿಯಲ್ಲಿ ಗಾಂಜಾ ಬೆಳೆಸಲು ಟೆಂಟ್ ಹಾಕಿ ವಿಶೇಷ ಬಲ್ಪ್ ಗಳನ್ನ ಬಳಸಿ ಅದರೊಳಗೆ ಕೃತಕ ಬೆಳಕು ಸೃಷ್ಟಿಸಿದ್ದಾರೆ ಒಳಗೆ ಕುಂಡಗಳನ್ನು ಇಟ್ಟು ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದರು.
ಗಾಂಜಾ ಬೆಳೆಯಲು ಅಂತರ್ಜಾಲದಲ್ಲಿನ ಮಾಹಿತಿಯೊಂದಿಗೆ ಬೀಜಗಳನ್ನು ಆನ್ಲೈನ್ ಮೂಲಕ ತರಿಸಿಕೊಂಡು ಗಿಡಗಳನ್ನು ಬೆಳೆಸಿ ಈ ವಿದ್ಯಾರ್ಥಿಗಳಿಂದ ಗಾಂಜಾ ಖರೀದಿಸುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.