ಇತರೆ
ಕುಂದಾಪುರ ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ

Views: 160
ಕುಂದಾಪುರ: ಕರ್ಕುಂಜೆ ಗ್ರಾಮದ ಬಾಬಿ (75) ಅವರು ಗುಡ್ರಿ ಎಂಬಲ್ಲಿ ತನ್ನ ಬೀಡಾ ಅಂಗಡಿಯಲ್ಲಿರುವಾಗ ವಂಡ್ಸೆ ಕಡೆಯಿಂದ ಬೈಕ್ ನಲ್ಲಿ ಬಂದ ಇಬ್ಬರು ಅವರ ಕುತ್ತಿಗೆಯಲ್ಲಿದ್ದ ಸರ ಅಪಹರಿಸಿದ ಘಟನೆ ನಡೆದಿದೆ.
ಕುಡಿಯಲು ನೀರು ಕೇಳಿದ್ದು ನೀಡಿದಾಗ, ಬಾಬಿ ಅವರ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಬಲತ್ಕಾರವಾಗಿ ಕಿತ್ತು ಬೈಕಿನಲ್ಲಿ ನೇರಳಕಟ್ಟೆ ಕಡೆಗೆ ಪರಾರಿಯಾಗಿದ್ದಾರೆ.
ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.