ಕುಂದಾಪುರ ಭಾರತ್ ಅಕ್ಕಿ ವಿತರಣೆಗೆ ಚಾಲನೆ

Views: 118
ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ತತ್ತರಿಸಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತ ಅಕ್ಕಿಯನ್ನು ಮಾರುಕಟ್ಟೆಗೆ ತಂದಿದೆ ಇದರ ಜೊತೆಗೆ ಗೋದಿ ಇನ್ನಿತರ ಧಾನ್ಯಗಳು ಕಡಿಮೆ ದರದಲ್ಲಿ ದೊರೆಯುವಂತೆ ಮಾಡಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಹೇಳಿದರು.
ಅವರು ಮಂಗಳವಾರ ಶಾಸ್ತ್ರೀ ಸರ್ಕಲ್ ಬಳಿ ಕುಂದಾಪುರ ಮಂಡಲ ವತಿಯಿಂದ ಭಾರತ್ ಅಕ್ಕಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಶಂಕರ್ ಅಂಕರಗಟ್ಟೆ ,ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ ಎಸ್, ಪುರಸಭೆ ಸದಸ್ಯರಾದ ವೀಣಾ ಭಾಸ್ಕರ್, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ್ ವಿ, ವನಿತಾ ಬಿಲ್ಲವ, ವಿಜಯ್ ಎಸ್ ಪೂಜಾರಿ ರತ್ನಾಕರ್, ಪುಷ್ಪಾ ಶೆಟ್, ರೂಪಾ ಪೈ, ಲಕ್ಷ್ಮೀ ಮಂಜು ಬಿಲ್ಲವ, ರೋಹಿಣಿ ಪೈ, ಸೌರಭಿ ಎಸ್, ಮಂಜು ಬಿಲ್ಲವ, ದಿವಾಕರ ಕಡ್ಗಿ, ಸುನಿಲ್ ಶೆಟ್ಟಿ, ಮಹೇಶ್ ಶಣೈ, ಶ್ವೇತ ಎಸ್ ರಾವ್ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಕೆಜಿಗೆ 29ಗಳಂತೆ ತಲಾ ಹತ್ತು ಕೆಜಿಯ ಒಂದು ಸಾವಿರ ಪ್ಯಾಕೆಟ್ ಗಳನ್ನು ಮಾರಾಟ ಮಾಡಲಾಯಿತು.