ಕರಾವಳಿ

ಕುಂದಾಪುರ: ಬೈಕ್ ಕಳ್ಳತನ ಆರೋಪಿಯ ಬಂಧನ

Views: 132

ಕುಂದಾಪುರ: ಇತ್ತೀಚಿಗೆ ಕುಂದಾಪುರದ ಭಂಡಾರ್ಕಾರ್ಸ್‌ ಕಾಲೇಜು ರಸ್ತೆಯಲ್ಲಿಯಲ್ಲಿರುವ ಸರಕಾರಿ ನೌಕರರ ಸಂಘದ ಕಟ್ಟಡದ ಬಳಿ ನಿಲ್ಲಿಸಿದ್ದ ಹೀರೋ ಹೋಂಡಾ ಕಂಪೆನಿಯ ಸ್ಪ್ಲೆಂಡರ್‌ ಬೈಕನ್ನು ಕಳ್ಳತನ ನಡೆದಿತ್ತು.

ಕಳ್ಳತನ ಪ್ರಕರಣ ಬೇಧಿಸಿರುವ ಪೊಲೀಸರ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ರಂಜಿತ್ (25) ಈತನ ಮೇಲೆ ಐದಕ್ಕೂ ಹೆಚ್ಚು ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಕುಂದಾಪುರ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಯು.ಬಿ ನಂದಕುಮಾರ್‌, ಪಿ.ಎಸ್.ಐ ವಿನಯ ಕೊರ್ಲಹಳ್ಳಿ, ಪಿ.ಎಸ್.ಐ ಪ್ರಸಾದ ಕುಮಾರ್.ಕೆ ಹಾಗೂ ಸಿಬ್ಬಂದಿಯವರಾದ ಸಂತೋಷ ಕುಮಾರ್, ಶ್ರೀಧರ್, ರಾಮ ಹಾಗೂ ಬೈಂದೂರು ಠಾಣಾ ಅಪರಾಧ ವಿಭಾಗದ ಸಿಬ್ಬಂದಿರವರು ಆರೋಪಿಯಾದ ರಂಜಿತ್‌ (25), ಕಾಲ್ತೋಡು ಗ್ರಾಮ ಎಂಬಾತನನ್ನು ಬೈಂದೂರು ಜಂಕ್ಷನ್‌ ಬಳಿಯಲ್ಲಿ ಪತ್ತೆ ಮಾಡಿ ಆರೋಪಿಯು ಕಳವು ಮಾಡಿದ ಹೀರೋ ಹೋಂಡಾ ಕಂಪೆನಿಯ ಸ್ಪ್ಲೆಂಡರ್‌ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,  ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Related Articles

Back to top button