ಕುಂದಾಪುರ:ಯುವತಿಗೆ ಚಿಕ್ಕಮ್ಮನಿಂದಲೇ 30 ಲಕ್ಷ ನಗದು, ಚಿನ್ನಾಭರಣ ವಂಚನೆ

Views: 115
ಕುಂದಾಪುರ:ಹಂಗಳೂರಿನ ಪೂಜಾ (22) ಅವರಿಗೆ 30 ಲಕ್ಷ ರೂಪಾಯಿ, ಚಿನ್ನಾಭರಣ ವಂಚಿಸಿದ ಚಿಕ್ಕಮ್ಮನ ವಿರುದ್ಧ ಯುವತಿಯೊಬ್ಬಳು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೂಜಾ ಅವರಿಗೆ 2 ವರ್ಷವಿದ್ದಾಗ ಅವರ ತಾಯಿ ಗೀತಾ ಮೃತಪಟ್ಟಿದ್ದು, ಗೀತಾ ಅವರ 10 ಲಕ್ಷ ರೂ. ಹಣ ಮತ್ತು 400 ಗ್ರಾಂನಷ್ಟು ಚಿನ್ನಾಭರಣಗಳನ್ನು ಪೂಜಾ ಅವರ ಅಜ್ಜಿ ಸಾಧು ಯಾನೆ ಶಾರದಾ ಮತ್ತು ಚಿಕ್ಕಮ್ಮಂದಿರಾದ ಸವಿತಾ ಹಾಗೂ ಸುನೀತಾರವರು ಸ್ವಾಧೀನದಲ್ಲಿಟ್ಟು ಕೊಂಡಿದ್ದರು. ಸಾಧು ಅವರು ಆರೋಪಿ ಸುನೀತಾ ಅವರಲ್ಲಿ 10 ಲಕ್ಷ ರೂ. ಪೂಜಾ ಹೆಸರಿಗೆ ಡಿಪಾಸಿಟ್ ಇಡುವಂತೆ ಹೇಳಿದ್ದು ಆರೋಪಿ ಸ್ವಂತ ಹೆಸರಿನಲ್ಲಿ ಡಿಪಾಸಿಟ್ ಇಟ್ಟು ಪೂಜಾಗೆ 6 ಲಕ್ಷ ರೂ. ರಸೀದಿ ಮಾತ್ರ ನೀಡಿದ್ದರು. ಪ್ರೌಢಶಾಲೆಗೆ ಹೋಗುವಾಗ ಹೊಡೆದು, ಬೈದು, ವಿಷ ಆಹಾರ ನೀಡಿ ಕೊಲ್ಲಲು ಪ್ರಯತ್ನಿಸಿದ್ದರು.
ಪೂಜಾ ಅಜ್ಜಿ ಸಾದು ರವರ ಮರಣದ ನಂತರ ಅವರ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ವಶಪಡಿಸಿಕೊಂಡು ವಾಪಸ್ ನೀಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಪ್ರಕರಣ ದಾಖಲಾಗಿದೆ.