ಕರಾವಳಿ

ಕುಂದಾಪುರದ ಮದ್ದುಗುಡ್ಡೆ ಅಯ್ಯಪ್ಪ ವೃತಧಾರಿ ಶಬರಿಮಲೆಯಲ್ಲಿ ಹೃದಯಾಘಾತದಿಂದ ಸಾವು 

Views: 97

ಕುಂದಾಪುರ: ಮಕರ ಸಂಕ್ರಾಂತಿಯಂದು ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು ವೀಕ್ಷಿಸಲು ತೆರಳಿದ್ದ ಅಯ್ಯಪ್ಪ ವೃತಧಾರಿ ಶಬರಿಮಲೆಯಲ್ಲಿಯೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಶಬರಿಮಲೆಯಲ್ಲಿ ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಕುಂದಾಪುರ ಪುರಸಭೆ ವ್ಯಾಪ್ತಿಯ ತಾಲೂಕಿನ ಮದ್ದುಗುಡ್ಡೆ ನಿವಾಸಿ ನಾಗರಾಜ್ ಖಾರ್ವಿ (38) ಎಂದು ತಿಳಿದು ಬಂದಿದೆ.

ನಾಗರಾಜ್ ಹಾಗೂ ತಂಡ ಜನವರಿ 15 ರಂದು ಮಕರ ಜ್ಯೋತಿ ದರ್ಶನ ಪಡೆಯಲು ವೃತಧಾರಿಗಳಾಗಿ ತೆರಳಿದ್ದರು. ಆದರೆ ಶಬರಿ ಮಲೆಯಲ್ಲಿ ಇದ್ದಕ್ಕಿದ್ದಂತೆ ನಾಗರಾಜ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅತೀ ಹೆಚ್ಚು ಸಂಖ್ಯೆಯಲ್ಲಿ ಅಯ್ಯಪ್ಪ ವೃತಧಾರಿಗಳು ಇದ್ದಿದ್ದರಿಂದ ತಕ್ಷಣ ಚಿಕಿತ್ಸೆ ನೀಡಲು ಅಥವಾ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಾಗರಾಜ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Related Articles

Back to top button