ಕುಂದಾಪುರದಲ್ಲಿ ಭಾರೀ ಮಳೆ: ನೆರೆಯಿಂದ ಕೃಷಿ ಭೂಮಿ ಜಲಾವೃತ

Views: 0
ಕುಂದಾಪುರ: ಕುಂದಾಪುರ ತಾಲೂಕಿನಾದ್ಯಂತ ಮಂಗಳವಾರ ತಡರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ.
ಕರಾವಳಿ ಭಾಗದಲ್ಲಿ ಮುಂಗಾರು ಬಿರುಸು ಪಡೆದುಕೊಂಡಿದ್ದು, ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲು ಮೋಡಕವಿದ ವಾತಾವರಣದ ನಡುವೆ ಸಾಧಾರಣ ಮಳೆಯಾಗಿದ್ದು ,ಸಂಜೆಯಾಗುತ್ತಲೇ ಬಿರುಸುಗೊಂಡ ಮಳೆ ತಾಲೂಕಿನ ವಕ್ವಾಡಿಯ ಸುತ್ತಮುತ್ತ ರಾತ್ರಿ ಇಡೀ ಸುರಿದ ಮಳೆಗೆ ನದಿ ಉಕ್ಕಿ ಹರಿದು ಕೃಷಿ ಭೂಮಿ ಸಂಪೂರ್ಣ ಜಲಾ ವೃತ್ತ ಗೊಂಡಿದೆ.
ತಾಲೂಕಿನ ಕೆಲವೊಂದು ಕಡೆ ಸತತ ಸುರಿದ ಮಳೆಗೆ ನೆರೆ ಆವರಿಸಿಕೊಂಡಿದ್ದು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ.
ಸಮುದ್ರ ಅಲೆಗಳ ಅಬ್ಬರ ಜಾಸ್ತಿಯಾಗಿ ತೀರದಲ್ಲಿರುವ ಮರಗಳು ಮತ್ತು ತಡೆ ಗೋಡೆಗಳು ಸಮುದ್ರ ಪಾಲಾಗಿದೆ. ಸಮುದ್ರದ ಅಲೆ ಇನ್ನೂ ಜಾಸ್ತಿಯಾದಲ್ಲಿ ತೀರ ಪ್ರದೇಶದ ಮನೆಗಳಿಗೆ ಅಪಾಯ ಸಂಭವಿಸುವ ಭೀತಿ ಉಂಟಾಗಿದೆ.
ಜೂನ್ 28 ರ ವರೆಗೂ ಎಲ್ಲೋ ಅಲರ್ಟ್ ಘೋಷಿಸಿದ್ದು, ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಸಮುದ್ರದ ಅಲೆಗಳು ಕೂಡ ಅಬ್ಬರ ಹೆಚ್ಚುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.