ಕುಂದಗನ್ನಡ ಅಕಾಡೆಮಿಗೆ ಅನುದಾನ ಬಿಡುಗಡೆಗೆ ಒತ್ತಾಯ : ಕೆ. ಜಯಪ್ರಕಾಶ ಹೆಗ್ಡೆ

Views: 1
ಕುಂದಾಪುರ :ಕುಂದಾಪುರ ಭಾಷಾ ಅಕಾಡೆಮಿಗೆ ಸಂಬಂಧಪಟ್ಟಂತೆ ಹೊಸ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಶುಕ್ರವಾರ ಕುಂದಾಪುರದಲ್ಲಿ ಮಾತನಾಡಿದ,ಅವರು ರಾಜ್ಯಾದ್ಯಂತ ಸಂಚರಿಸಿ 34 ವರದಿಗಳನ್ನು ಸಲ್ಲಿಸಿದ್ದೇನೆ. ಕೊರೊನಾ ಸಂದರ್ಭದಲ್ಲಿ ಅನಾಥಾಶ್ರಮದಲ್ಲಿ ತಂದೆ ತಾಯಿ ಮೃತಪಟ್ಟ ಸುಮಾರು 7000 ಮಂದಿ ಅನಾಥ ಮಕ್ಕಳಿಗೆ ಸಾಮಾಜಿಕ, ಶೈಕ್ಷಣಿಕ ಅನುಕೂಲತೆಯ ದೃಷ್ಟಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಿದ್ದೇನೆ ಎಂದರು.
ಫ್ಲೈ ಓವರ್ ಕೆಳಗೆ ಪಾರ್ಕಿಂಗ್ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವರನ್ನು ಭೇಟಿ ಮಾಡಿ , ಅಂಡರ್ ಪಾಸ್ ಕೆಳಗೆ ಇಂಟರ್ ಲಾಕ್ ಅಳವಡಿಸಿ ಸುಂದರಗೊಳಿಸುವಂತೆ ಮನವಿ ಮಾಡಿದ್ದೇನೆ,
ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಸುಗಳು ಬಾರದಿರುವ ಗ್ರಾಮಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು.
ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಗ್ರಾಮಾಂತರ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುವುದರ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.