ಧಾರ್ಮಿಕ
ಕಿರಿಮಂಜೇಶ್ವರ ಅಗಸ್ತ್ಯೆಶ್ವರ ರಥೋತ್ಸವ ಸಂಪನ್ನ

Views: 2
ಕುಂದಾಪುರ : ಬೈಂದೂರು ತಾಲೂಕಿನ ಇತಿಹಾಸ ಪ್ರಸಿದ್ಧ ಕಿರಿಮಂಜೇಶ್ವರ ಅಗಸ್ತ್ಯೆಶ್ವರ ದೇವಸ್ಥಾನದ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ದೇವಳದ ಪ್ರಧಾನ ತಂತ್ರಿ ಕೋಟ ಕೃಷ್ಣ ಸೋಮಯಾಜಿ ನೇತೃತ್ವದಲ್ಲಿ ಬೆಳಿಗ್ಗೆ ರಥಾರೋಹಣ, ಅಷ್ಟವಧಾನ, ರಾತ್ರಿ ಭೂತಬಲಿ, ಶಯನೋತ್ಸವ ಹಾಗೂ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಂದ ಶ್ರೀ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಂಪನ್ನಗೊಂಡಿದೆ.