ಕೃಷಿ

ಕಾವೇರಿ ಜಲವಿವಾದಕ್ಕೆ ಮೋದಿಗೆ ರಕ್ತದಲ್ಲಿ ಪತ್ರ ಬರೆದ ಕರವೇ ಕಾರ್ಯಕರ್ತರು

Views: 0

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ನೀರಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ.

ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ರಕ್ತದಲ್ಲಿ ಪತ್ರವನ್ನು ಬರೆದಿದ್ದಾರೆ.

ಪತ್ರ ಬರೆದ ಕುರಿತು ಪ್ರತಿಕ್ರಿಯಿಸಿದ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ , ರೈತರಿಗೆ ಮೋಸವಾಗಿದೆ. ತಕ್ಷಣ ಪ್ರಧಾನ ಮಂತ್ರಿಗಳು ತಕ್ಷಣ ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ ರಾಜ್ಯದ ಮುಖ್ಯಮಂತ್ರಿಗಳ ತುರ್ತು ಸಭೆ ಕರೆದು ಕರ್ನಾಟಕಕ್ಕೆ ಆದ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

ರಾಜ್ಯದ 28 ಸಂಸದರ ನಿಯೋಗ ಪ್ರಧಾನ ಮಂತ್ರಿ ಬಳಿ ತೆರಳಿ ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಮತ್ತು ನೀರಿನ ಪ್ರಮಾಣದ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಮಾಡಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ಸಂಸದರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದ್ದಾರೆ.

ಈ ವೇಳೆ ಜಬಿವುಲ್ಲಾ, ಲೋಕೇಶ್, ಗೋಪಾಲ್ ದೇವರ ಮನಿ, ಶಿವಕುಮಾರ್, ರವಿಕುಮಾರ್, ಈಶ್ವರ್, ಮಹೇಶ್ವರಪ್ಪ, ಎಂಡಿ ರಫೀಕ್, ಖಾದರ್ ಭಾಷಾ, ಆಟೋ ರಫೀಕ್, ಮುಸ್ತಫ, ಭಾಷಾ, ದಾದಾಪೀರ್, ತನ್ವೀರ್, ಖಾದರ್ ಭಾಷಾ ಇತರರು ಇದ್ದರು.

Related Articles

Back to top button