ಧಾರ್ಮಿಕ
ಕಾಳಾವರ ಮಹಾಲಿಂಗೇಶ್ವರ- ಕಾಳಿಂಗ,ಸುಬ್ರಮಣ್ಯ ದೇವಸ್ಥಾನಕ್ಕೆ ಪ್ರಮೋದ್ ಮದ್ವರಾಜ್ ಭೇಟಿ

Views: 127
ಕುಂದಾಪುರ :ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಅವರು ಜ.23 ರಂದು ಮಂಗಳವಾರ ಕಾಳಾವರದ ಮಹಾಲಿಂಗೇಶ್ವರ- ಕಾಳಿಂಗ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇಗುಲದ ಆಡಳಿತ ಮಂಡಳಿ ಸಮಿತಿಯ ಸದಸ್ಯರು ಅವರನ್ನು ಬರಮಾಡಿಕೊಂಡು ಗೌರವಿಸಿದರು.
ನಂತರ ಮಧ್ವರಾಜ್ ಅವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ,ವಿಚಾರ ವಿನಿಮಯ ನಡೆಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಶಾನಾಡಿ ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿದ್ದರು. ಸಮಿತಿಯ ಸದಸ್ಯರಾದ ರಂಜಿತ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡ ಮೋರ್ಚಾದ ಅಧ್ಯಕ್ಷ ಮಹೇಶ್ ಕಾಳಾವರ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಜ್ಯೋತಿ ಎನ್ ಕಾಂಚನ್, ಬಾಬಿ ಶೆಡ್ತಿ, ಶಿಲ್ಪಿ ಅರುಣ್ ಮೇಸ್ತ್ರಿ, ಗೋಪಾಲ, ಸತ್ಯ ಉಪಸ್ಥಿತಿತರಿದ್ದರು.ರಘುವೀರ್ ಮಾಸ್ಟರ್ ವಂದಿಸಿದರು.