ಶಿಕ್ಷಣ

ಕಾಲೇಜಿನ ಗ್ರಂಥಾಲಯಕ್ಕೆ:  ಲೇಖಕಿ ಡಾ.ಪಾರ್ವತಿ ಜಿ ಐತಾಳ್  ಪುಸ್ತಕ ಹಸ್ತಾಂತರ 

Views: 0

ಕುಂದಾಪುರ: ವಿದ್ಯಾರ್ಥಿಗಳು ಪುಸ್ತಕ ಪ್ರೀತಿ ಬೆಳೆಸಿಕೊಳ್ಳುವ ಮುಖೇನ ಸ್ವತಂತ್ರ ಯೋಚನೆ ಹಾಗೂ ಯೋಜನೆಗಳಿಗೆ ಮುಂದಾಗ ಬೇಕು. ಆಗ ಮಾತ್ರ ತಮ್ಮದೇ ಆದ ಬದುಕು ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬಹುದು ಎಂದು ರೋಟರಿ ಕ್ಲಬ್ ಕುಂದಾಪುರದ ಡಿಸ್ಟಿಕ್ ಚೇರ್ಮನ್ ಆವರ್ಸೆ ಮುತ್ತಯ್ಯ ಶೆಟ್ಟಿ ಹೇಳಿದರು.

ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯಕ್ಕೆ ಕುಂದಾಪುರದ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕಿ ಹಾಗೂ ಲೇಖಕಿ ಡಾ| ಪಾರ್ವತಿ ಜಿ. ಐತಾಳ್ ನೀಡಿದ  ಪುಸ್ತಕಗಳನ್ನು ಪಾಂಶುಪಾಲರಿಗೆ ಹಸ್ತಾಂತರಿಸಿ ಮಾತನಾಡಿದರು.

ಈ ಸಂದರ್ಭ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಶ್ರೀ ವೆಂಕಟೇಶ್ ನಾವುಂದ, ಕಾರ್ಯದರ್ಶಿ ಶ್ರೀ ನಾಗರಾಜ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು  ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ಸಾಹಿತ್ಯದ ಓದು ವಿದ್ಯಾರ್ಥಿಗಳ ಬದುಕಿನಲ್ಲಿ ತಾಳ್ಮೆ, ಸಹನೆಯೊಂದಿಗೆ ಮಾನಸಿಕ ಖಿನ್ನತೆಯನ್ನು ದೂರ ಮಾಡುತ್ತದೆ ಎಂದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕಾಲೇಜಿನ ಗ್ರಂಥಾಪಾಲಕ ಶ್ರೀ ಮಹೇಶ್ ನಾಯ್ಕ್ ಪ್ರಾರ್ಥಿಸಿ, ವಂದಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ರೇಷ್ಮಾ ಶೆಟ್ಟಿ ನಿರೂಪಿಸಿದರು.

Related Articles

Back to top button