ಇತರೆ
ಕಾಲು ಸಂಕ ದಾಟುವಾಗ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿ ಸಾವು

Views: 1
ಮಂಗಳೂರು: ಕಾಲು ಸಂಕ ದಾಟುವಾಗ ಆಕಸ್ಮಿಕವಾಗಿ ಕಾಲು ಜಾರಿ ಚರಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪ್ರಣಚ ಗ್ರಾಮದಲ್ಲಿ ನಡೆದಿದೆ.
ಕೇಶವ ನಾಯಕ್ ಎಂ ( 51) ಮೃತಪಟ್ಟವರು. ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮನೆಯ ಬಳಿಯಲ್ಲಿರುವ ನೀರು ಹರಿಯುತ್ತಿರುವ ಚರಂಡಿಗೆ ಹಾಕಿರುವ ಕಾಲು ಸಂಕವನ್ನು ದಾಟುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಕಿವುಚಿ ಬಿದ್ದು ಮೇಲಕ್ಕೆ ಏಳಲು ಆಗದೆ ಮೃತಪಟ್ಟಿದ್ದಾರೆಎಂದು ತಿಳಿಯಲಾಗಿದೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.