ಕರಾವಳಿ
ಕರಾವಳಿಯಲ್ಲಿ ಭಾರೀ ಮಳೆ : ಪಡುಬಿದ್ರಿಯಲ್ಲಿ ತೀವ್ರಗೊಂಡ ಕಡಲ್ಕೊರೆತ

Views: 0
ಕರಾವಳಿಯಲ್ಲಿ ಬಿರುಸುಗೊಂಡ ಭಾರಿ ಮಳೆಗೆ ಪಡುಬಿದ್ರಿ ಕಾಡಿನ ಪಟ್ಟ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದೆ.
ಇಲ್ಲಿನ ಪಡುಬಿದ್ರಿ ಬೀಚ್ ಪಕ್ಕದ ಕಾಡಿನ ಪಟ್ಟ ಶಂಕರ್ ಎಂ ಅಮೀನ್ ಅವರ ಮನೆ ಬಳಿ ಸುಮಾರು 50 ಮೀಟರ್ ಭಾಗದಲ್ಲಿ ಕಡಲು ಕೊರತದಿಂದಾಗಿ ಮನೆಗಳು ಅಪಾಯ ಸ್ಥಿತಿಯಲ್ಲಿವೆ.
ಕರಾವಳಿಯಲ್ಲಿ ಭಾರೀ ಮಳೆ : ಪಡುಬಿದ್ರಿಯಲ್ಲಿ ತೀವ್ರಗೊಂಡ ಕಡಲ್ಕೊರೆತ
ಕಡಲಿನ ಅಬ್ಬರಕ್ಕೆ ತೀರದಲ್ಲಿರುವ ವಿದ್ಯುತ್ ಕಂಬಗಳು, ತೆಂಗಿನ ಮರಗಳು ನೆಲಕ್ಕೆ ಉರುಳಿದೆ.ಗೋಧಾಮು ಒಳಗೆ ಇದ್ದ ಬೆಲೆಬಾಳುವ ದೋಣಿಗಳ ಸಹಿತ ಹಲವಾರು ಸಾಮಾನುಗಳನ್ನು ಮೀನುಗಾರರು ತೆರವುಗೊಳಿಸಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಮೀನುಗಾರಿಕಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.