ಒಡೆಯರ್ ಬೇಡ, ಪ್ರತಾಪ್ ಸಿಂಹ ಬೇಕು ಮೈಸೂರಲ್ಲಿ ಬೀದಿಗಿಳಿದ ಅಭಿಮಾನಿಗಳು..ಮೋದಿ ದೇಶಕ್ಕೆ..ಮೈಸೂರಿಗೆ ಸಿಂಹ… ಘೋಷಣೆ..!

Views: 59
ಮೈಸೂರು: ಸಂಸದ ಪ್ರತಾಪ ಸಿಂಹಗೆ ಬಿಜೆಪಿ ಟಿಕೆಟ್ ಕೈ ತಪ್ಪುವ ಭೀತಿ ಹಿನ್ನೆಲೆಯಲ್ಲಿ ಅಭಿಮಾನಿಗಳು ಬೀದಿಗಿಳಿದಿದ್ದಾರೆ. ಮೈಸೂರು ರಿಂಗ್ ರಸ್ತೆಯಲ್ಲಿ ಬೈಕ್ ರ್‍ಯಾಲಿ ನಡೆಸಿದ ಪ್ರತಾಪ ಸಿಂಹ ಬೆಂಬಲಿಗರು ಯದುವೀರ್ ಬೇಡ, ಪ್ರತಾಪ್ ಸಿಂಹ ಬೇಕು ಎಂದು ಘೋಷಣೆ ಕೂಗಿದ್ದಾರೆ. ರಸ್ತೆ ಯುದ್ದಕ್ಕೂ ಪ್ರತಾಪ ಸಿಂಹಗೆ ಜೈಕಾರ ಕೂಗಲಾಗುತ್ತಿದೆ.
ಹಿನಕಲ್ ಫ್ಲೈಓವರ್ ಬಳಿ ಪ್ರತಿಭಟನೆ ನಡೆಸಿದ ಬೆಂಬಲಿಗರು ದೇಶಕ್ಕೆ ಮೋದಿ, ಮೈಸೂರಿಗೆ ಪ್ರತಾಪ್ ಸಿಂಹ ಎಂದು ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಮಹಿಳಾ ಅಭಿಮಾನಿಯೊಬ್ಬರು ಪ್ರತಾಪ ಸಿಂಹಗೆ ಟಿಕೆಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗಳಗಳನೆ ಕಣ್ಣೀರಿಟ್ಟ ಘಟನೆ ನಡೆದಿದೆ. ಒಂದು ವೇಳೆ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಮಹಿಳೆ ಹೇಳಿದ್ದಾರೆ.
ಪೋಸ್ಟರ್ ಹಿಡಿದ ಪ್ರತಾಪ ಸಿಂಹ ಅಭಿಮಾನಿಗಳು ಬಡವರ ಮಕ್ಕಳು ಬೆಳೆಯಬಾರದಾ? ಮೈಸೂರು ಹೈವೇ ಮಾಡಿದಕ್ಕಾಗಿ ಟಿಕೆಟ್ ಇಲ್ವಾ. ಕಾಂಗ್ರೆಸ್ಸಿಗೆ ಟಕ್ಕರ್ ಕೊಟ್ಟಿದಕ್ಕೆ ಇಲ್ವಾ? ಟಿಪ್ಪು ರೈಲಿಗೆ ಒಡೆಯರ್ ಹೆಸರು ಇಟ್ಟಿದಕ್ಕೆ ಟಿಕೆಟ್ ಇಲ್ವಾ? ಅಭಿವೃದ್ಧಿ ಕೆಲಸ ಮಾಡಿದಕ್ಕೆ ಇಲ್ವಾ? ಒಕ್ಕಲಿಗ ಅನ್ನೋ ಕಾರಣಕ್ಕೆ ಟಿಕೆಟ್ ಕೊಡಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮೈಸೂರಲ್ಲಿ ಒಂದು ಪ್ರತಾಪ್ ಸಿಂಹ ಟಿಕೆಟ್ ಕೊಡಿ ಅಂತ ಪ್ರತಿಭಟನೆ ನಡೆಯುತ್ತಿದ್ದರೆ ಮತ್ತೊಂದೆಡೆ ಮಹಾರಾಜರು ರಾಜಕೀಯಕ್ಕೆ ಬರಬೇಡಿ ಅನ್ನೋ ಕೂಗು ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮೈಸೂರು ರಾಜವಂಶಸ್ಥರ ಕೊಡುಗೆ ಈ ನಾಡಿಗೆ ಅಪಾರವಾಗಿದೆ. ಅದನ್ನು ಎಣಿಕೆ ಮಾಡಲಿಕ್ಕೆ ಸಾಧ್ಯವಿಲ್ಲ. ನಮ್ಮ ಮಹಾರಾಜರನ್ನು ಇದೇ ವೈಭೋಗದಿಂದ ನೋಡಲು ಬಯಸುತ್ತೇವೆ ಹೊರತು ರಸ್ತೆಗಳಲ್ಲಿ ಮತಕ್ಕಾಗಿ ಜನರನ್ನು ಬೇಡೋ ಪರಿಸ್ಥಿತಿಯಲ್ಲಿ ನೋಡಲು ಇಷ್ಟವಿಲ್ಲ ಎಂದು ಆಗ್ರಹಿಸಿದರು.