ಶಿಕ್ಷಣ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗಂಭೀರ ಅಧ್ಯಯನಕ್ಕೆ ಈ ಬಾರಿಯೂ 50:30:20ರ ಸೂತ್ರ

Views: 96

ಈ ವರ್ಷಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳ ಅವಕಾಶವಿದ್ದು 50:30:20 ಮಾದರಿಯಲ್ಲಿ ಮುಂದುವರಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತೀರ್ಮಾನಿಸಿದೆ.

ಶೇಕಡಾ 50ರಷ್ಟು ಸುಲಭ, ಶೇಕಡಾ 30ರಷ್ಟು ಸಾಧಾರಣ ಮತ್ತು ಶೇಕಡಾ 20ರಷ್ಟು ಕಠಿಣ ಅಥವಾ ಅನ್ವಯಿಕ ಪ್ರಶ್ನೆಗಳು 2023 -24ನೇ ಸಾಲಿನ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಗಳಲ್ಲಿ ಇರಲಿದೆ ಎಂದು ತಿಳಿದುಬಂದಿದೆ.

ಈ ಪೈಕಿ ಶೇಕಡ 30 ಅಂಕಗಳು ಕಠಿಣ ಮತ್ತು ಸಾಧಾರಣ, ಸುಲಭ ಎಂದು ಮತ್ತೆ ವಿಭಜನೆಗೊಳ್ಳುವುದರಿಂದ ಪರೀಕ್ಷೆಯ ಕಾಠಿಣ್ಯ ವ್ಯತ್ಯಾಸ ಕೊಳ್ಳುತ್ತದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿರುತ್ತಾರೆ.

ಒಟ್ಟಾರೆಯಾಗಿ ಕೋವಿಡ್ ಅವಧಿಯಲ್ಲಿ ಇದ್ದಷ್ಟು ಸುಲಭವಾಗಿ ಈ ಬಾರಿ ಪರೀಕ್ಷೆ ಇರಲಾರದು.

ಕೋವಿಡ್ ಅವಧಿಯಲ್ಲಿ ಪರೀಕ್ಷೆ ಹೇಗಿತ್ತು?

ಕೋವಿಡ್ ಅವಧಿಯ 2020 -21 ಮತ್ತು 2021- 22ರ ಸಾಲಿನಲ್ಲಿ ಕಠಿಣ ಪ್ರಶ್ನೆ ಅಥವಾ ಅನ್ವಯಿಕ ಉತ್ತರ ಬಯಸುವ ಪ್ರಶ್ನೆಗಳನ್ನು ಕಡಿಮೆಗೊಳಿಸಿ 60:30:10 ಕಾಠಿಣ್ಯದ ಮಾದರಿ ಅನುಸರಿಸಲಾಗಿತ್ತು. 2022- 23ನೇ ಸಾಲಿನಲ್ಲಿ 50:30:20 ಮಾದರಿಯನ್ನು ಪ್ರಸ್ತಾಪಿಸಿದ್ದು, ಪೂರ್ಣರೂಪದಲ್ಲಿ ಜಾರಿಗೆ ಬಂದಿರಲಿಲ್ಲ

ಭಾಷೆಗಳು ಮುಖ್ಯ ವಿಷಯ ಪರೀಕ್ಷೆಗಳಲ್ಲಿ ಇದೇ ಮಾದರಿಯನ್ನು ಅನುಸರಿಸಲು ಮಂಡಳಿ ತೀರ್ಮಾನಿಸಿದೆ.

ಮಂಡಳಿ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆಯಲ್ಲಿಯೂ ಇದೇ ಮಾದರಿಯನ್ನು ಪಾಲಿಸಲಾಗಿದೆ.

ರಾಜ್ಯದಲ್ಲಿ ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು 50:30:20 ಮಾದರಿಯಲ್ಲಿಯೇ ನಡೆಸಲಾಗುತ್ತಿತ್ತು ಹಿಂದಿನ ವರ್ಷ ಇದೇ ಮಾದರಿ ಅನುಸರಿಸಿದಾಗ ಕೋವಿಡ್ ಅವಧಿಗಿಂತ ಕಡಿಮೆ ಫಲಿತಾಂಶ ದಾಖಲಾಗಿತ್ತು.

ಆದರೆ ಈ ಸಲ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿಯಲ್ಲಿ  ಮೂರು ವಾರ್ಷಿಕ ಪರೀಕ್ಷೆಗಳು ನಡೆಯಲಿವೆ ಮತ್ತು ಮೊದಲ ಬಾರಿಗೆ 80 ಅಂಕಗಳಿಗೆ ಪರೀಕ್ಷೆ ನಡೆಯುತ್ತಿದೆ. ಈ ಬದಲಾವಣೆಗಳಿದ್ದರೂ ಮಂಡಳಿ ಕಳೆದ ವರ್ಷದ ತನ್ನ ಮಾದರಿಯಲ್ಲಿ ಬದಲಾವಣೆ ಮಾಡಿಲ್ಲ

ವಿದ್ಯಾರ್ಥಿಗಳಿಗೆ ಸಾಧಕಗಳೇನು?

–ಈ ವರ್ಷ ಮೂರು ಪರೀಕ್ಷೆ ಅವಕಾಶ ಇರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯನ್ನು ನಿರ್ಲಕ್ಷಿಸುವ ಸಾಧ್ಯತೆ, ಈ ಹಿನ್ನೆಲೆಯಲ್ಲಿ ಪರೀಕ್ಷೆಯ ಕಾಠಿಣ್ಯ ಹೆಚ್ಚಿಸುವುದರಿಂದ ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನಶೀಲರಾಗಬಹುದು.

–ಉನ್ನತ ಶಿಕ್ಷಣದಲ್ಲಿ ಅನ್ವಯಕ್ಕೆ ಹೆಚ್ಚು ಮನ್ನಣೆ ಸಿಗುವುದರಿಂದ ಅನ್ವಯ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಅನ್ವಯಿಕ ಮನೋಭಾವಕ್ಕೆ ಕಾರಣವಾಗಬಲ್ಲದು.

–ಮೂರು ಪರೀಕ್ಷೆಗಳಲ್ಲಿಯೂ ಏಕರೂಪದ ಮಾದರಿ ಅನುಸರಿಸುವುದರಿಂದ ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯ.

ವಿದ್ಯಾರ್ಥಿಗಳಿಗೆ ಪರೀಕ್ಷೆ ಬಾಧಕಗಳೇನು?

-ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆ ಬರೆಯುವ ಅವಕಾಶ ಇರುವುದರಿಂದ ಮೊದಲ ಪರೀಕ್ಷೆಯತ್ತ ನಿರ್ಲಕ್ಷ.

-ಮೊದಲ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದ ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚು.

-50:30:20 ಮಾದರಿ ಅನುಸರಿಸಿದಾಗ ಕಡಿಮೆಯಾಗುವ ಒಟ್ಟು ಫಲಿತಾಂಶ

Related Articles

Back to top button