ಶಿಕ್ಷಣ

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಆವರಣದಲ್ಲಿ ಸಿನಿಮಾ ಶೂಟಿಂಗ್: ತರಾಟೆಗೆ ತೆಗೆದುಕೊಂಡ ಪೋಷಕರು 

Views: 96

ಕನ್ನಡ ಕರಾವಳಿ ಸುದ್ದಿ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಸೈಂಟ್ ವಿಕ್ಚರ್ಸ್ ಪ್ರೌಢ ಶಾಲೆಯ ಆವರಣದಲ್ಲಿ  ಸಿನಿಮಾವೊಂದಕ್ಕೆ ಶೂಟಿಂಗ್ ಗೆ ಅವಕಾಶ ಕೊಟ್ಟ ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಆರ್ಯನ್ ಅಭಿನಯದ `ಲವ್ ಟು ಲಸ್ಸಿ’ ಎಂಬ ಕನ್ನಡ ಚಲನಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇದಕ್ಕೆ ಕಳೆದ ಒಂದೂವರೆ ತಿಂಗಳ ಹಿಂದೆಯೇ ಶಾಲಾ ಸಂಚಾಲಕರಿಂದ ಅನುಮತಿ ಪಡೆಯಲಾಗಿತ್ತು. ಆದರೆ ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇರಲಿಲ್ಲ. ಜೊತೆಗೆ ಪರೀಕ್ಷಾ ಕೇಂದ್ರವಾಗಿದ್ದ ಪ್ರೌಢಶಾಲೆಯಲ್ಲಿ ಪರೀಕ್ಷಾ ದಿನದಂದೇ ಶೂಟಿಂಗ್ ಗೆ ಅವಕಾಶ ಮಾಡಿಕೊಟ್ದಿದ್ದು ಎಷ್ಟು ಸರಿ ಎಂದು ಪೋಷಕರಿಂದ ಅಸಮಾಧಾನ ವ್ಯಕ್ತವಾಯಿತು.

ಬೆಳಗ್ಗೆ ಶೂಟಿಂಗ್ ನಡೆಯುತ್ತಿದ್ದ ಸಂದರ್ಭ ಎಸ್‌ ಎಸ್‌ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಶಾಲಾ ಗೇಟು ಬಳಿ ಬಂದಾಗ ಗೇಟು ತೆರೆಯಲು ಪೊಲೀಸರು, ಗೇಟ್‌ ಕೀಪರ್ ನಿರಾಕರಿಸಿದರು. ಇಲ್ಲಿ ಶೂಟಿಂಗ್ ನಡೆಯುತ್ತಿದೆ ಎಂದು ಉತ್ತರ ನೀಡಿದರು ಇದರಿಂದ ಕೆರಳಿದ ಪೋಷಕರು ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಸೆಕ್ಷನ್ ಇರುವಾಗ ಯಾವ ರೀತಿ ಅವಕಾಶ ಮಾಡಿ ಕೊಟ್ಟಿದ್ದೀರಿ ಎಂದು ಶಾಲಾ ಆಡಳಿತ ಮಂಡಳಿಯವರನ್ನು ತರಾಟೆಗೆತ್ತಿಕೊಂಡರು.

ಇದಾದ ಬಳಿಕ ಸುದ್ದಿ ತಿಳಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಶೂಟಿಂಗ್ ಸ್ಪಾಟ್ ಗೆ ಬಂದು ಸಿನಿಮಾ ಚಿತ್ರೀಕರಣ ನಿಲ್ಲಿಸುವಂತೆ ಸೂಚಿಸಿದರು. ಜೊತೆಗೆ ಪೊಲೀಸರ ಮುಖಾಂತರ ಚಲನಚಿತ್ರ ತಂಡಕ್ಕೆ ಶಾಲಾ ಬಳಿಯಿಂದ ತೆರಳುವಂತೆ ಸೂಚನೆ ನೀಡಿದ್ರು. ಇಷ್ಟೆಲ್ಲ ಆದ್ರೂ ಪರೀಕ್ಷಾ ಕೇಂದ್ರದ 200 ಮೀಟರ್ ಒಳಗಡೆ, ಹಾಗೆಯೇ ಸೆಕ್ಷನ್ 144 ಜಾರಿ ಇರುವಾಗ ಶಾಲಾ ಆಡಳಿತ ಮಂಡಳಿಯ ಶೂಟಿಂಗ್ ಗೆ ಹೇಗೆ ಅವಕಾಶ ಕೊಟ್ಟಿದ್ದಾರೆ ಎಂಬುದು ಪೋಷಕರು ವಾದಿಸಿದ್ದಾರೆ.

Related Articles

Back to top button