ಉಡುಪಿ: ಪದ್ಮಶಾಲಿ ತರುಣವೃಂದ ಕಿನ್ನಿಮುಲ್ಕಿ, ಹರುಷ 85 ವರುಷ ಕಾರ್ಯಕ್ರಮ ಉದ್ಘಾಟನೆ

Views: 55
ಉಡುಪಿ:ಪದ್ಮಶಾಲಿ ತರುಣವೃಂದ ಕಿನ್ನಿಮುಲ್ಕಿ, ಉಡುಪಿ ಇದರ ಹರುಷ 85 ವರುಷ ಈ ಸರಣಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಶ್ರೀ ವೀರಭದ್ರ ಕಲಾಭವನ, ಕಿನ್ನಿಮುಲ್ಕಿಯಲ್ಲಿ ಜರುಗಿತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷರಾಗಿ ತರುಣ ವೃಂದದ ಅಧ್ಯಕ್ಷರಾದ ಶ್ರೀ ನಾಗರಾಜ್ ಕೆ. ಇವರು ವಹಿಸಿಕೊಂಡರು.
ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಪ್ರಭಾಶಂಕರ ಪದ್ಮಶಾಲಿ ಇವರು ದೀಪ ಪ್ರಜ್ವಲಿಸಿ, ಮಾತನಾಡಿದ ಅವರು ಸೇವೆಯ ಮೂಲಕ ಎಲ್ಲರ ಏಳಿಗೆ ಸಾಧಿಸಿದಾಗ ತನ್ನ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಬೆಳೆದು ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷರಾದ ಶ್ರೀ ರಾಮದಾಸ್ ಶೆಟ್ಟಿಗಾರ್, ಪಣಿಯಾಡಿ ಅವರು ಉದ್ಘಾಟನೆ ನೆರವೇರಿಸಿ, ಸಮಾಜದಲ್ಲಿ ಸಹಕಾರ, ಸೌಹಾರ್ದತೆ ಬೆಳಗಿದಲ್ಲಿ ಸಮಾಜ ಇನ್ನಷ್ಟು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ ಎಂದರು
ಗೌರವ ಉಪಸ್ಥಿತಿಯಲ್ಲಿ ತರುಣ್ ವೃಂದದ ಹಿರಿಯ ಸದಸ್ಯರದ ರಾಘವ ಪದ್ಮಶಾಲಿ ಅವರು ವಹಿಸಿದ್ದರು.ಯು.ಎ.ಇ. ಪದ್ಮಶಾಲಿ ಸಮುದಾಯ ದುಬೈ ಇದರ ಅಧ್ಯಕ್ಷರಾದ ಶ್ರೀ ರಘುರಾಮ್ ಶೆಟ್ಟಿಗಾರ್, ಕಿನ್ನಿಮುಲ್ಕಿ, ಶ್ರೀ ವೀರಭದ್ರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಸತೀಶ್ ಶೆಟ್ಟಿಗಾರ್, ಆತ್ರಾಡಿ ಇವರು ಅಭ್ಯಾಗತರಾಗಿ ವೇದಿಕೆಯನ್ನು ಅಲಂಕರಿಸಿದ್ದರು.
ಕೋಟ, ವಿವೇಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಎಸ್. ಶಿವಪ್ರಸಾದ್ ಶೆಟ್ಟಿಗಾರ್, ಕುಕ್ಕಿಕಟ್ಟೆ ಇವರು ಬ್ರಹ್ಮೋಪದೇಶದ ಬಗ್ಗೆ ಉಪನ್ಯಾಸ ನೀಡಿದರು. ಪದ್ಮಶಾಲಿ ತರುಣ ವೃಂದದ ಪ್ರಧಾನ ಕಾರ್ಯದರ್ಶಿ ಶ್ರೀ ಅರವಿಂದ ಬಿ. ಪದ್ಮಶಾಲಿ, ಕೋಶಾಧಿಕಾರಿ ಶ್ರೀ ರಾಜಕೇಸರಿ ಇವರು ಉಪಸ್ಥಿತರಿದ್ದರು.
ಕುಮಾರಿ ವಿಜೇತ, ಅನ್ವಿತ, ಅನನ್ಯ ಪ್ರಾರ್ಥನಾ, ರಿಜುತ ಪ್ರಾರ್ಥನೆಗೈದರು. ಹರೀಶ್ ಕುಮಾರ್ ಕಿನ್ನಿಮುಲ್ಕಿ ಪ್ರಸ್ತಾವನೆಗೈದರು. ಶ್ರೀಮತಿ ಲಲಿತಾ ಸತೀಶ್ ಸ್ವಾಗತಿಸಿದರು. ದೀಪಕ್ ಕುಮಾರ್ ಕಿನ್ನಿಮುಲ್ಕಿ ಗಣ್ಯರನ್ನು ಗೌರವಿಸಿದರು. ಅರವಿಂದ್ ಬಿ. ಪದ್ಮಶಾಲಿ ವಂದಿಸಿದರು. ಶ್ರೀಮತಿ ಮಮತಾ ರೂಪೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಹರುಷ 85 ವರುಷ ಇದರ ಸರಣಿ ಕಾರ್ಯಕ್ರಮದ ಪ್ರಥಮ ಕಾರ್ಯಕ್ರಮದ ಸಾಮೂಹಿಕ ಬ್ರಹ್ಮೋಪದೇಶದಲ್ಲಿ ಸಮಾಜದ 22 ವಟುಗಳಿಗೆ ಬ್ರಹ್ಮೋಪದೇಶ ನೀಡಲಾಯಿತು.