ರಾಜಕೀಯ
ಉಡುಪಿ ಜಿಲ್ಲಾದ್ಯಂತ ಶೇ. 78.46 ಮತದಾನ

Views: 0
ಉಡುಪಿ ಜಿಲ್ಲಾದ್ಯಂತ ಶಾಂತಿಯುತ ಮತದಾನ ಯಶಸ್ವಿಯಾಗಿ ನಡೆದಿದೆ.
ಒಟ್ಟು ಶೇ. 78.46 ರಷ್ಟು ಮತದಾನವಾಗಿದ್ದು, ಕಾಕ೯ಳ ಅತೀ ಹೆಚ್ಚು ಶೇ. 81.30, ಉಡುಪಿ ಅತೀ ಕಡಿಮೆ ಶೇ. 75.87 ರಷ್ಟು ಮತದಾನವಾಗಿದೆ.
ಕಾಪು, ಕುಂದಾಪುರ ಮತ್ತು ಬೈಂದೂರು ಸರಾಸರಿ ಮತದಾನ ಕಾಯ್ದುಕೊಂಡಿದೆ. ಕುಂದಾಪುರ ಶೇ. 78.94, ಬೈಂದೂರು ಶೇ. 77.84 ಕಾಪು ಶೇ. 78.79, ರಷ್ಟು ಮತದಾನವಾಗಿದೆ.
ಮತದಾನ ಜಾಗೃತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಕಾಯ೯ಕ್ರಮಗಳು ಕಳೆದ ಭಾರಿಗಿಂತ ಮತ ಪ್ರಮಾಣ ಹೆಚ್ಚಿಸಲು ಸಾಧ್ಯವಾಗಿಲ್ಲ. ಆದರೆ ಹೊಸ ಮತದಾರರ ಮತದಾನ ಪ್ರಮಾಣ ಉತ್ತಮವಾಗಿದೆ.
ಈ ಬಾರಿಯ ಚುನಾವಣೆ ಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಒಟ್ಟು ಮತದಾನ ಶೇ. ಪ್ರಮಾಣದಲ್ಲಿ 0.41 ರಷ್ಟು ಇಳಿಕೆಯಾಗಿದೆ.