ಕರಾವಳಿ
ಉಡುಪಿ ಜಯಲಕ್ಷ್ಮೀ ಸಿಲ್ಕ್ ನಲ್ಲಿ ಮಿಸ್ ಫೈರಿಂಗ್: ಗನ್ ವಾರಸುದಾರ ಪತ್ತೆ

Views: 291
ಉಡುಪಿ: ಇಲ್ಲಿನ ಬನ್ನಂಜೆ ಜಯಲಕ್ಷ್ಮಿ ಸಿಲ್ಕ್ಸ್ ವಸ್ತ್ರ ಮಳಿಗೆಯಲ್ಲಿ ಮಿಸ್ ಫೈರಿಂಗ್ ಆಗಿ ಓರ್ವ ವ್ಯಕ್ತಿಗೆ ಗುಂಡು ತಗುಲಿದೆ. ಗುಂಡೇಟು ತಗುಲಿದ ಗಾಯಾಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳಿಗೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಗನ್ ಪತ್ತೆಯಾಗಿದ್ದು, ಅದನ್ನು ಆಪರೇಟ್ ಮಾಡಿ ಪರೀಕ್ಷಿಸಲು ಸಿಬ್ಬಂದಿ ಮುಂದಾಗಿದ್ದಾಗ ಅಲ್ಲೇ ಇದ್ದ ಇನ್ನೋರ್ವ ಸಿಬ್ಬಂದಿಗೆ ಗುಂಡೇಟು ತಗುಲಿತ್ತು
ಇಂದು ಗನ್ ವಾರಸುದಾರ ಮಂಗಳೂರಿನ ಜಯಪ್ರಕಾಶ್ ಅವರದ್ದಾಗಿದ್ದು,ಅವರು ಮಳಿಗೆಗೆ ಬಂದಾಗ ಗನ್ ಅಲ್ಲಿಯೇ ಇಟ್ಟು ಶೌಚಾಲಯಕ್ಕೆ ಹೋಗಿದ್ದಾಗ ಘಟನೆ ನಡೆದಿದೆ.