ಯುವಜನ
ಉಡುಪಿ:ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ

Views: 143
ಉಡುಪಿ: ಕ್ಷುಲ್ಲಕ ಕಾರಣಕ್ಕೆಯುವಕನನ್ನು ಅಟ್ಟಾಡಿಸಿ 6 ಮಂದಿಯ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಣಿಪಾಲದ ಸರಳೇಬೆಟ್ಟು ಬಳಿ ನಡೆದಿದೆ.
ಮುಂಬಯಿ ಮೂಲದ ಆರುಶ್ ಕುಮಾರ್ (21) ಹಲ್ಲೆಗೊಳಗಾದ ಯುವಕ. ಆರುಷ್ ಕುಮಾರ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಯುವಕರ ತಂಡ ರೆಸ್ಟೋರೆಂಟ್‌ನಲ್ಲಿನಲ್ಲಿದ್ದ ವೇಳೆ ಆ ತಂಡದ ಓರ್ವನಿಗೆ ಆರುಶ್ ಕುಮಾರ್‌ನ ಕಾಲು ತಾಗಿತ್ತು. ಈ ಹಿನ್ನೆಲೆಯಲ್ಲಿ ತಗಾದೆ ತೆಗೆದ ಯುವಕರ ತಂಡ ರೆಸ್ಟೋರೆಂಟ್‌ನಲ್ಲಿ ಹಲ್ಲೆ ನಡೆಸಿದೆ. ಮಾತ್ರವಲ್ಲದೆ ಆರುಶ್ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ವರೆಗೆ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರು ಮಂದಿ ವಶಕ್ಕೆ
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ರಿಷಿತ್, ಗಗನ್, ದಿಲೀಪ್, ತನಿಷ್ಯ್, ಅಂಕಿತ್ ಮತ್ತು ಓರ್ವ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ






