ಉಡುಪಿ:”ಕರಿಮಣಿ ಮಾಲಕ ನೀನಲ್ಲ” ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ರೀಲ್ಸ್ ರಾಣಿ ಕೇಸ್‌ಗೆ ಹೊಸ ಟ್ವಿಸ್ಟ್!

Views: 478
ಉಡುಪಿ: ಪ್ರಿಯಕರನ ಜೊತೆ ಸೇರಿ ಪತ್ನಿಯೇ ಪತಿಯನ್ನು ಸಾಯಿಸಿದ ಭಯಾನಕ ಘಟನೆ ಕಾರ್ಕಳ ಜನತೆಯನ್ನು ಬೆಚ್ಚಿ ಬೀಳಿಸಿದೆ. ಪ್ರಕರಣ ದಾಖಲಿಸಿಕೊಂಡ ಅಜೆಕಾರು ಪೊಲೀಸರು ಆರೋಪಿಗಳ ತನಿಖೆಯಲ್ಲಿ ಕೊಲೆಯ ಸತ್ಯವನ್ನು ಕಲೆ ಹಾಕುತ್ತಿದ್ದಾರೆ.
ಆರೋಪಿ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್ ಹೆಗ್ಡೆ ಅವರನ್ನು ಪೊಲೀಸರು ಕೊಲೆಯಾದ ಸ್ಥಳಕ್ಕೆ ಕರೆ ತಂದು ಮಹಜರು ಮಾಡಿದ್ದಾರೆ. ಬಾಲಕೃಷ್ಣ ಪೂಜಾರಿ ಅವರ ಹತ್ಯೆ ನಡೆದ ಮನೆಗೆ ಇಬ್ಬರನ್ನು ಕರೆತಂದ ಪೊಲೀಸರು ಮಹತ್ವದ ಮಾಹಿತಿಯನ್ನು ಪಡೆದಿದ್ದಾರೆ.
ಕಾರ್ಕಳ ತಾಲೂಕು ಅಜೆಕಾರಿನ ಬಾಲಕೃಷ್ಣ ಪೂಜಾರಿ ಅವರು ಕಳೆದ 25 ದಿನಗಳಿಂದ ಜ್ವರ, ವಾಂತಿಯಿಂದ ಬಳಲುತ್ತಿದ್ದರು. ಕಾಮಾಲೆ ರೋಗ ಇದೆ ಎಂದು ಹೇಳಿ ಬಾಲಕೃಷ್ಣ ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ, ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೂಡ ನೀಡಲಾಗಿತ್ತು.
ಬಾಲಕೃಷ್ಣ ಪೂಜಾರಿ ಅವರ ಸಾವಿನ ಬಳಿಕ ಪ್ರತಿಮಾ ತನ್ನ ಸಹೋದರ ಸಂದೀಪ ಜೊತೆ ಮಾಹಿತಿ ಬಾಯಿ ಬಿಟ್ಟಿದ್ದರು. ಪ್ರಿಯಕರ ದಿಲೀಪ್ ಜೊತೆ ಸೇರಿ ಮನೆಯಲ್ಲಿ ಗಂಡನನ್ನ ಬೆಡ್ ಶೀಟ್‌ನಿಂದ ಮುಖ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಪ್ರತಿಮಾ ಒಪ್ಪಿಕೊಂಡಿದ್ದಾರೆ.
ಕೊಲೆ ಆರೋಪಿ ಪ್ರತಿಮಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿದ್ದರು. ಗಂಡನ ಜೊತೆ ಕರಿಮಣಿ ಮಾಲೀಕ ನೀನಲ್ಲ ಎಂದು ಹಾಡು ಹಾಡುತ್ತಿದ್ದವಳು ತಾಳಿಯ ಒಡೆಯನಿಗೆ ಮುಹೂರ್ತ ಇಟ್ಟಿದ್ದಾಳೆ.
ಕೊಲೆ ಆರೋಪಿ ಪ್ರತಿಮಾ ಅವರು ಪತಿ, ಮಕ್ಕಳ ಜೊತೆ ಸದಾ ರೀಲ್ಸ್ ಮಾಡುತ್ತಿದ್ದರು. ಕಾಡಿಸಿ, ಪೀಡಿಸಿ ಪತಿಯ ಜೊತೆ ರೀಲ್ಸ್ ಮಾಡುತ್ತಿದ್ದ ಪ್ರತಿಮಾ ವಿಡಿಯೋಗಳನ್ನ ನೋಡಿದ್ರೆ ಸುಖಿ ಸಂಸಾರ ಅನ್ನಿಸುತ್ತಿತ್ತು. ಆದರೆ ಪ್ರತಿಮಾಗೆ ಗಂಡನಿಗಿಂತ ಗೆಳೆಯನ ಮೇಲೆ ಪ್ರೀತಿ ಹೆಚ್ಚಾಗಿತ್ತು
ಪ್ರತಿಮಾಗೆ ಇನ್ಸ್‌ಸ್ಟಾಗ್ರಾಂ ಮೂಲಕವೇ ಆರೋಪಿ ದಿಲೀಪ್ ಹೆಗ್ಡೆ ಪರಿಚಯವಾಗಿತ್ತು. ಗೆಳೆಯನ ಜೊತೆ ಸೇರಿ ಪ್ರತಿಮಾ, ಪತಿ ಬಾಲಕೃಷ್ಣ ಪೂಜಾರಿ ಅವರನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.