ಈ ಶಾಲೆಯಲ್ಲಿ ಕೊಠಡಿಗಳ ಅಭಾವ; ಮಕ್ಕಳಿಗೆ ಸ್ಮಶಾನದಲ್ಲಿ ಪಾಠ, ಸಮಾಧಿ ಪಕ್ಕದಲ್ಲಿ ಊಟ!

Views: 50
ಬಿಹಾರ :ಶಾಲೆಯಲ್ಲಿ ಕೊಠಡಿಗಳಿಲ್ಲ. ಊಟ ಮಾಡಲೂ ಸ್ಥಳವಿಲ್ಲ. ಹೀಗಾಗಿ, ಮಕ್ಕಳು ಮಕ್ಕಳು ಸ್ಮಶಾನದಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಸಮಾಧಿಗಳ ಪಕ್ಕದಲ್ಲಿ ಅಥವಾ ಮಸೀದಿಯ ಗೇಟ್ ಸಮೀಪ ಕುಳಿತು ಊಟ ಮಾಡುತ್ತಿದ್ದಾರೆ. ಇದು ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಕಂಡುಬಂದ ದಯನೀಯ ಸ್ಥಿತಿ.
ಮಧುಬನಿಯ ಅಂಧರತಧಿ ಬ್ಲಾಕ್ನ ಹರ್ನಾ ಪಂಚಾಯತ್ನ ಉರ್ದು ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಸ್ಮಶಾನವೇ ಶಾಲೆ. ತರಗತಿ ಕೊಠಡಿಗಳ ಅಭಾವದಿಂದಾಗಿ ಸ್ಮಶಾನದಲ್ಲಿ ಪಾಠ ಕೇಳುವಂತಾಗಿದೆ.
ಮುಖ್ಯೋಪಾಧ್ಯಯರು ಪ್ರತಿಕ್ರಿಯಿಸಿದ್ದು ಹೀಗೆ
ಈ ಕುರಿತು ಮಾತನಾಡಿರುವ ಶಾಲೆಯ ಮುಖ್ಯೋಪಾಧ್ಯಯ ಜಗನ್ನಾಥ್ ಪಾಸ್ವಾನ್, “ಶಾಲೆಯಲ್ಲಿ ಎರಡು ತರಗತಿಗಳಿವೆ. ಒಂದನ್ನು ಅಡುಗೆ ಮತ್ತು ಧಾನ್ಯಗಳ ಸಂಗ್ರಹಣ ಕೋಣೆಯಾಗಿ ಮಾಡಲಾಗಿದೆ. ಉಳಿದ ಒಂದು ಕೊಠಡಿಯನ್ನು ತರಗತಿಗಾಗಿ ಮತ್ತು ಸಿಬ್ಬಂದಿ ಬಳಸುತ್ತಿದ್ದಾರೆ. ಆರಂಭದಲ್ಲಿ ಶಾಲೆಗೆ 400 ಮಕ್ಕಳು ನೋಂದಣಿಯಾಗಿದ್ದರು. ಆದರೆ, ತರಗತಿ ಕೊರತೆಯಿಂದಾಗಿ ಈ ಸಂಖ್ಯೆ ಕುಸಿಯಿತು. ಇದೀಗ 295 ಮಕ್ಕಳಿದ್ದು, ಅವರಿಗೆ 9 ಮಂದಿ ಶಿಕ್ಷಕರಿದ್ದಾರೆ. ಆದರೆ, ಮೂಲ ಸೌಕರ್ಯ ಕೊರತೆಯಿಂದ ಮಕ್ಕಳು ತರಗತಿಗೆ ಬದಲಾಗಿ ರಸ್ತೆ, ಸ್ಮಶಾನ, ಬೇವಿನ ಮರದ ಕೆಳಗೆ ಕುಳಿತು ಪಾಠ ಕೇಳುತ್ತಿದ್ದಾರೆ” ಎಂದು ತಿಳಿಸಿದರು.