ಆರ್ಥಿಕ

ಇಂದಿನಿಂದ ದೇಶಾದ್ಯಂತ ಪೆಟ್ರೋಲ್, ಡೀಸೆಲ್ 2 ರೂ ಇಳಿಕೆ

Views: 22

ಇಂದಿನಿಂದ ದೇಶಾದ್ಯಂತ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ₹ 2 ರೂಪಾಯಿ ಇಳಿಕೆಯಾಗಲಿದೆ. ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ  ಕೇಂದ್ರ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ. ಪರಿಷ್ಕೃತ ಬೆಲೆಯು ಮಾರ್ಚ್ 15, ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ ಎಂದು ಸಚಿವರು ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಕಡಿತವು ಗ್ರಾಹಕರ ವೆಚ್ಚವನ್ನು ಕಡಿಮೆ ಮಾಡುತ್ತದೆ. ಡೀಸೆಲ್‌ನಲ್ಲಿ ಚಲಿಸುವ 58 ಲಕ್ಷ ಭಾರೀ ಸರಕುಗಳ ವಾಹನಗಳು, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ.

Related Articles

Back to top button