ಇತರೆ
ಆಸ್ತಿ ವಿಚಾರದಲ್ಲಿ ಎರಡು ಕುಟುಂಬದ ಮಹಿಳೆಯರು ಜಡೆ ಎಳೆದುಕೊಂಡು ಮಾರಾಮಾರಿ!

Views: 107
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಮೀನಿನಲ್ಲಿ ದಾರಿ ಬಿಡುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದು ಮಹಿಳೆಯರು ಜಡೆ ಎಳೆದಾಡಿ ಹೊಡೆದಾಡಿಕೊಂಡು ಮಾರಾಮಾರಿ ನಡೆದಿದೆ.
ಹೊಲದಲ್ಲಿ ಹೊಡೆದಾಡಿಕೊಂಡ ಎರಡೂ ಕುಟುಂಬದವರು ದಾಯಾದಿಗಳಾಗಿದ್ದು, ಕಳೆದ ಕೆಲ ವರ್ಷಗಳಿಂದ ಜಮೀನು ವಿಚಾರಕ್ಕೆ ಕಚ್ಚಾಡಿಕೊಂಡಿದ್ದರು. 16 ಎಕ್ರೆ ಜಮೀನು ಪಾಲಿನ ವಿಚಾರದಲ್ಲಿ ಎರಡೂ ಕುಟುಂಬದ ಗಲಾಟೆ ನ್ಯಾಯಾಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗಲೇ ರಸ್ತೆ ಬಂದ್ ಮಾಡಿದ ವಿಚಾರದಲ್ಲಿ ಜಗಳ ಆರಂಭವಾಗಿದೆ.
ಆರಂಭದಲ್ಲಿ ಬೈದಾಡಿಕೊಂಡಿದ್ದ ಜಗಳ ಮಹಿಳೆಯರು ಮದ್ಯ ಪ್ರವೇಶಿಸುತ್ತಿದ್ದಂತೆ ಜಡೆ ಜಗಳಕ್ಕೆ ಕಾರಣವಾಗಿದೆ. ಎರಡೂ ಕುಟುಂಬದವರೂ ಒಬ್ಬರ ನಡುವೆ ಮತ್ತೊಬ್ಬರು ಹೊಡೆದಾಡಿಕೊಂಡಿದ್ದು, ಈ ವೇಳೆ ಮಹಿಳೆಯರು ಜಡೆ ಹಿಡಿದು ಎಳೆದಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಕಟ್ಟೆಗೊಲ್ಲ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇವರ ಹೊಡೆದಾಟದ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.