ಯುವಜನ
ಆಗುಂಬೆ ಘಾಟಿಯಲ್ಲಿ ಕಂದಕಕ್ಕೆ ಬಿದ್ದ ವ್ಯಕ್ತಿ: ಪ್ರಾಣ ರಕ್ಷಿಸಿದ ಯುವಕರು

Views: 5
ಆಗುಂಬೆ ಘಾಟಿಯ ಏಳನೇ ತಿರುವಿನಲ್ಲಿ 30 ಅಡಿ ಕಂದಕಕ್ಕೆ ಬಿದ್ದ ವ್ಯಕ್ತಿಯೊಬ್ಬರನ್ನು ಅಲ್ಲಿನ ಯುವಕರು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಶಿವಮೊಗ್ಗದ ಮೊಹಮ್ಮದ್ ಭಾಷಾ ಎಂಬುವರು ಟೋರಿಂಗ್ ವಾಹನದಲ್ಲಿ ಟ್ರ್ಯಾಕ್ಟರ್ ಅನ್ನು ಟೋರಿಂಗ್ ಮಾಡಿಕೊಂಡು ಬರುತ್ತಿದ್ದರು. 7ನೇ ತಿರುವಿನಲ್ಲಿ ವಾಹನ ಹತ್ತಲಾಗದೆ ನಿಂತಿದೆ. ಮಹಮ್ಮದ್ ಭಾಷಾ ಚಾಲಕನಿಗೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ವಾಹನ ದಿಢೀರ್ ಹಿಂದಕ್ಕೆ ಬಂದಿದ್ದು ಮೊಹಮ್ಮದ್ ಭಾಷಾ ತಪ್ಪಿಸಿಕೊಳ್ಳುವ ಭರದಲ್ಲಿ ಕಂದಕಕ್ಕೆ ಬಿದ್ದಿದ್ದಾನೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ಪ್ರಯಾಣಿಕರು ತಮ್ಮ ವಾಹನದಲ್ಲಿದ್ದ ಬೆಡ್ ಶೀಟನ್ನು ಹಗ್ಗ ವನ್ನಾಗಿ ಬಳಸಿ ಕಂದಕಕ್ಕೆ ಇಳಿದು ಭಾಷಾ ಅವರನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಯುವಕರ ಸಾಹಸಕ್ಕೆ ಸ್ಥಳದಲ್ಲಿರುವ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.