ಸಾಂಸ್ಕೃತಿಕ
ಅಮೆರಿಕದ ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ಕುಂದಾಪುರದ ರಿಷಬ್ ಶೆಟ್ಟಿಗೆ ‘ವಿಶ್ವ ಕನ್ನಡಿಗ ಪ್ರಶಸ್ತಿ’

Views: 0
ಕಾಂತಾರಾ ಸಿನಿಮಾದ ಮೂಲಕ ವಿಶ್ವದಾದ್ಯಂತ ಹೆಸರು ಮಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಅಮೆರಿಕದ ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ವಾಷಿಂಗ್ಟನ್ ಸಿಯಾಟ್ ನಲ್ಲಿ ‘ವಿಶ್ವ ಕನ್ನಡಿಗ _2023 ‘ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹೊಂಬಾಳೆ ಫಿಲಂ ನಿರ್ಮಾಣದ ಕಾಂತಾರ ಚಿತ್ರ ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿಗಳನ್ನು ಗಳಿಸಿ ಮನೆಮಾತಾಗಿರುವ ಚಿತ್ರ ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ನಂತರ ಅದನ್ನು ಮೆಚ್ಚಿ ನಾನಾ ಭಾಷೆಗಳಲ್ಲಿ ಡಬ್ಬಿಂಗ್ ಆಗಿದೆ
ರಿಷಬ್ ಶೆಟ್ಟಿ ಸನ್ಮಾನಕ್ಕೆ ಉತ್ತರಿಸಿ, ಹನಿ ಒಳಗೊಂದು ಸಾಗರವೇ ಇರುವಂತೆ ಕನ್ನಡವನ್ನು ಹೃದಯದಲ್ಲಿ ಇಟ್ಟುಕೊಂಡು ದೂರದ ಅಮೆರಿಕಾದಲ್ಲಿ ನೆಲೆಸಿರುವ ಸಹಸ್ರಾರು ಹೆಮ್ಮೆಯ ಕನ್ನಡಿಗರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು, ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ತುಂಬಾ ಆಭಾರಿಯಾಗಿದ್ದೇನೆ ಎಂದಿದ್ದಾರೆ.