ಕರಾವಳಿ
ಅಮಾಸೆಬೈಲು ಅನಂತ ಕೊಡ್ಗಿ ನಿಧನ

Views: 160
ಕುಂದಾಪುರ:ಇಲ್ಲಿನ ಅಜಂತಾ ಪ್ರಿಂಟರ್ಸ್ ಮಾಲಕ,ಉದ್ಯಮಿ, ಸಾಮಾಜಿಕ ದರೀಣ ಎ ಅನಂತ ಕೃಷ್ಣ ಕೊಡ್ಗಿ( 72 )ಶನಿವಾರ ನಿಧನರಾದರು.
ಮೃತರ ಪತ್ನಿ ಪುತ್ರನನ್ನು ಅಗಲಿದ್ದಾರೆ. ಹಿರಿಯ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದು, ಕುಂದಾಪುರ ತಾಲೂಕು ಬಿಜೆಪಿ ಖಜಾಂಚಿ, ಲಯನ್ಸ್ ಕ್ಲಬ್, ಕುಂದಾಪುರ ಬೋರ್ಡ್ ಹೈ ಸ್ಕೂಲ್ ಹಳೆ ವಿದ್ಯಾರ್ಥಿ ಸಂಘ ಮುಂತಾದ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮಾಜಿ ಶಾಸಕ ದಿ.ಎಜಿ ಕೊಡ್ಗಿಯವರ ಸಹೋದರ ಹಾಗೂ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ಚಿಕ್ಕಪ್ಪ
ಇವರ ನಿಧನಕ್ಕೆ ಹಲವಾರು ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.