ಅಪಘಾತದಲ್ಲಿ ತುಂಡಾಗಿ ಬೇರ್ಪಟ್ಟಿದ್ದ ತಲೆಯನ್ನು ಜೋಡಿಸಿ ಬಾಲಕನಿಗೆ ಮರು ಜೀವ ನೀಡಿದ ಇಸ್ರೇಲ್ ವೈದ್ಯರ ಸಾಹಸ

Views: 1
ಯಅಪಘಾತದಲ್ಲಿ ಬೇರ್ಪಟ್ಟಿದ ತಲೆಯನ್ನು ಯಶಸ್ವಿಯಾಗಿ ಜೋಡಿಸಿ, ಬಾಲಕನಿಗೆ ಮರು ಜೀವ ನೀಡಿ ಇಸ್ರೆಲ್ ವೈದ್ಯರು ಸಾಹಸ ಮರಿದಿದ್ದಾರೆ.
12 ವರ್ಷದ ಬಾಲಕ ಸುಲೇಮಾನ್ ಹುಸನ್ ಸೈಕಲ್ ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಕಾರುಡಿಕ್ಕಿ ಹೊಡೆದು ಆತನ ತಲೆಯೇ ಬೇರ್ಪಟ್ಟಿತು. ನಂತರ ಆತನನ್ನು ವೈದ್ಯಕೀಯ ಕೇಂದ್ರಕ್ಕೆ ವಿಮಾನದ ಮೂಲಕ ಕೊಂಡಯ್ಯಲಾಯಿತು. ತಪಾಸಣೆ ವೇಳೆ ಅಸ್ತಿ ರಜ್ಜುಗಳು ಹೆಚ್ಚು ಹಾನಿ ಒಳಗಾಗಿರುವುದು ಕಂಡು ಬಂದಿತ್ತು.
ಇಸ್ರೇಲ್ ವೈದ್ಯರ ತಂಡ ತುಂಡಾದ ತಲೆಯನ್ನು ಪುನರ್ ಜೋಡಿಸುವ ಮೂಲಕ ಬಾಲಕನಿಗೆ ಮರುಜೀವನ ನೀಡಿದ್ದಾರೆ.
ಇಂತಹ ಸ್ಥಿತಿಯಲ್ಲಿ ಬದುಕುವ ಅವಕಾಶ ಶೇಕಡ 50ರಷ್ಟು ಮಾತ್ರ ಆದರೆ ಶಸ್ತ್ರ ಚಿಕಿತ್ಸೆಯ ಪವಾಡ ಎಂಬುವಂತೆ ಬಾಲಕ ಚೇತರಿಸಿಕೊಂಡಿದ್ದಾನೆ ಎಂದು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ತಿಳಿಸಿದ್ದಾರೆ.
ನಾವು ಪುರಾಣದಲ್ಲಿ ಪಾರ್ವತಿಯಿಂದ ತಯಾರಾದ ಮೂರ್ತಿಯನ್ನು ಈಶ್ವರನು ಬೇರ್ಪಡಿಸಿದ ನಂತರ ಪುನಹ ತಲೆಯನ್ನ ಜೋಡಿಸಿದ್ದು. ಉಲ್ಲೇಖಿಸಲಾಗಿದೆ. ವೀರಭದ್ರನು ಪ್ರಜಾಪತಿ ದಕ್ಷನ ತಲೆಯನ್ನ ಕತ್ತರಿಸಿ ಹೋಮಕುಂಡಕ್ಕೆ ಎಸೆದಿದ್ದು. ನಂತರ ಈಶ್ವರ ಪ್ರತ್ಯಕ್ಷನಾಗಿ ದಕ್ಷನಿಗೆ ಮೇಕೆಯ ತಲೆಯನ್ನ ಜೋಡಿಸಿದ್ದು ಕೂಡ ಪುರಾಣದಲ್ಲಿ ಉಲ್ಲೇಖವಾಗಿತ್ತು.
ಅಂತಹದ್ದೇ ವಿದ್ಯಮಾನ ಇಸ್ರಲ್ ನ ವೈದ್ಯರು ಅಪಘಾತದಲ್ಲಿ ತುಂಡಾಗಿದ್ದ ಬಾಲಕನ ತಲೆಯನ್ನು ಮರು ಜೋಡಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆಯ ಬಗ್ಗೆ ಟೈಮ್ಸ್ ಆಫ್ ಇಸ್ರೇಲ್ ಜೊತೆ ಮೂಳೆ ಶಸ್ತ್ರ ಚಿಕಿತ್ಸೆ ವೈದ್ಯರಾದ ಒಹಾದ್ ಐನಾವ್ ಆಧುನಿಕ ತಂತ್ರಜ್ಞಾನದೊಂದಿಗೆ ಮರುಜೋಡಿಸುವ ಮೂಲಕ ಬಾಲಕನ ಪ್ರಾಣ ಉಳಿಸಿದ್ದಾರೆ.