ಅಡುಗೆ ಎಣ್ಣೆತುಂಬಿದ ಟ್ಯಾಂಕರ್ ಪಲ್ಟಿ: ಅಡುಗೆ ಎಣ್ಣೆ ಒಯ್ಯಲು ಮುಗಿದು ಬಿದ್ದ ಜನ

Views: 1
ಅಡುಗೆ ಎಣ್ಣೆತುಂಬಿದ ಟ್ಯಾಂಕರ್ ಪಲ್ಟಿಯಾದ ಹಿನ್ನೆಲೆಯಲ್ಲಿ ಅದರಲ್ಲಿದ್ದ ಅಡುಗೆ ಎಣ್ಣೆ ಒಯ್ಯಲು ಜನ ಮುಗಿಬಿದ್ದಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ನಡೆದಿದೆ.
ಭಾನುವಾರ ಬೆಳಗ್ಗೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿಯಾಗಿದೆ.
ಜನರು ಮೊದಲು ಇದು ಪೆಟ್ರೋಲ್ ತುಂಬಿದ ಟ್ಯಾಂಕರ್ ಎಂದುಕೊಂಡು ಹತ್ತಿರ ಹೋಗಲು ಹೆದರಿದ್ದರು. ಬಳಿಕ ಟ್ಯಾಂಕರ್‌ನಲ್ಲಿದ್ದ ಎಣ್ಣೆ ಕೆಳಗೆ ಚೆಲ್ಲಿದ್ದು, ಅದು ಅಡುಗೆ ಎಣ್ಣೆ ಎಂಬುದು ತಿಳಿದು ಬಂದಿದೆ. ತಕ್ಷಣ ಅದನ್ನು ತೆಗೆದುಕೊಂಡು ಹೋಗಲು ಮುಗಿಬಿದಿದ್ದಾರೆ.
ಜನರು ಟ್ಯಾಂಕರ್‌ನಿಂದ ಸೋರುತ್ತಿದ್ದ ಎಣ್ಣೆಯನ್ನು ತೆಗೆದುಕೊಂಡು ಹೋಗಲು ತಕ್ಷಣ ಕ್ಯಾನ್, ಬಕೆಟ್, ಕೊಡಗಳನ್ನು ತಂದಿದ್ದಾರೆ. ಜನರು ನಾ ಮುಂದು ತಾ ಮುಂದು ಎಂದು ಎಣ್ಣೆ ತುಂಬಿಕೊಂಡು ಮನೆಗೆ ಹೋಗಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಅಡುಗೆ ಎಣ್ಣೆ ತುಂಬಲು ಮುಂದಾಗಿದ್ದ ಜನರನ್ನು ಚದುರಿಸಿದ್ದಾರೆ. ಸದ್ಯ ಅಪಘಾತದಿಂದ ಚಾಲಕ ಹಾಗೂ ಕ್ಲೀನರ್ ಪಾರಾಗಿದ್ದಾರೆ.