ಜುಲೈ 16ರಂದು ಕರ್ಕಾಟಕ ಅಮಾವಾಸ್ಯೆ: ಸರ್ವರೋಗಕ್ಕೆ ಪಾಲೆ ಮರದ ಕಷಾಯ ಮದ್ದು

Views: 3
ಕರಾವಳಿ ಭಾಗದಲ್ಲಿ ಹೆಚ್ಚಾಗಿ ಆಟಿ ಅಮಾವಾಸ್ಯೆಯ ಆಚರಣೆ ದಿನದಂದು ಪಾಲೆ ಮರದ ಕಷಾಯ ಕುಡಿಯುವುದರಿಂದ ಸರ್ವರೋಗಕ್ಕೂ ಮುದ್ದು ನೀಡಿ ಎಲ್ಲಾ ಕಾಯಿಲೆ ನಿವಾರಿಸುತ್ತದೆ.
ಬಹಳ ಹಿಂದಿನಿಂದಲೂ ನಡೆದು ಬಂದಿರುವ ಈ ಆಚರಣೆಯು ಆರೋಗ್ಯ ದೃಷ್ಟಿಯಿಂದ ಪಾಲೆ ಮರದ ಕಷಾಯ ಕುಡಿಯುವುದು ಬಹಳ ಒಳ್ಳೆಯದು.
ಮುಂಜಾನೆ ಬ್ರಾಹ್ಮೀ ಮುಹೂರ್ತಕ್ಕೆ ಹೋಗಿ ಪಾಲೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತರಬೇಕು. ಅದಕ್ಕೆ ಕರಿಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಚೆನ್ನಾಗಿ ಕುದಿಸಲಾಗುತ್ತದೆ ಇದರಿಂದ ವರ್ಷವಿಡೀ ಬರುವ ಯಾವುದೇ ಕಾಯಿಲೆಯಿಂದ ದೂರವಾಗಬಹುದು.
ಮಲೇರಿಯಾ, ಅಪಸ್ಮಾರ, ಚರ್ಮರೋಗ, ಅಸ್ತಮಾ, ಹೊಟ್ಟೆ ನೋವು, ಅತಿಸಾರ, ಸಂಧಿ ನೋವು, ಮಲೇರಿಯಾ, ಸ್ತ್ರೀರೋಗದಂತ ಸಮಸ್ಯೆಗಳಿಗೆ ಇದು ಮನೆ ಮದ್ದಾಗಿದೆ.
ಪಾಲೆ ಮರದ ತೊಗಟನ್ನು ತಂದು ಅದರ ಹೊರ ಚರ್ಮ ತೆಗೆದು ಕಷಾಯ ಮಾಡಿ ಕುಡಿಯುವುದರಿಂದ ಬೊಜ್ಜು, ಹೈಪರ್ ಕೊಲೆಸ್ಟ್ರಾಲ್ ಸಮಸ್ಯೆ ದೂರವಾಗುತ್ತದೆ. ಆಟಿ ತಿಂಗಳಲ್ಲಿ ಪಾಲೆ ಮರದ ತೊಗಟೆಯಲ್ಲಿ ಔಷಧೀಯ ಗುಣಗಳು ಸಂಗ್ರಹವಾಗುತ್ತದೆ.
ಆಟಿ ತಿಂಗಳು ಋತು ಸಂಧಿ ಕಾಲವಾದ ಕಾರಣ ಪ್ರಾಕೃತಿಕ ಬದಲಾವಣೆಗಳಿಗೂ ಹಾಗೂ ಆ ಪ್ರದೇಶದ ಜನರ ಶಾರೀರಿಕ ಬದಲಾವಣೆಗಳು ಸಾಮಾನ್ಯ ಶರೀರವು ಈ ಬದಲಾವಣೆಗಳಿಗೆ ಹೊಂದಿಕೊಳ್ಳದಿದ್ದರೆ ರೋಗಗಳು ಸಾಮಾನ್ಯವಾಗಿ ಬಾಧಿಸುತ್ತದೆ.