ಅಖಿಲ ಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ರಜತೋತ್ಸವದ ಸರ್ವಾಧ್ಯಕ್ಷರಾಗಿ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ಆಯ್ಕೆ

Views: 2
ಕುಂದಾಪುರ : ಶ್ರೀ ಕ್ಷೇತ್ರ ಗೋಕರ್ಣದ ಗಂಗ ವಿಶ್ವೇಶ್ವರ ಸಭಾಂಗಣದಲ್ಲಿ ಅಗಸ್ಟ್ 3 ಮತ್ತು 4ರಂದು ಜರಗಲಿರುವ ಅಖಿಲ ಭಾರತ ಪದ್ಮಬ್ರಾಹಣ ಪುರೋಹಿತ ಸಂಘದ ರಜತ ಮಹೋತ್ಸವದ ಸರ್ವಾಧ್ಯಕ್ಷರಾಗಿ ಉಡುಪಿ ಜಿಲ್ಲೆಯ ಕೋಟೇಶ್ವರದ ಜ್ಯೋತಿಷ್ಯ ಚೂಡಾಮಣಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರು ಆಯ್ಕೆಯಾಗಿದ್ದಾರೆ ಎಂದು ಆಸ್ತಾನ ಗುರುಗಳಾದ ಬ್ರಹ್ಮಶ್ರೀ ಮಾರ್ಚಾಲು ಕೇಶವಮೂರ್ತಿ ಭಾರ್ಗವಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ದಿನಗಳ ಸಮ್ಮೇಳನದಲ್ಲಿ ಸದ್ಗುರು ಶ್ರೀ ಶ್ರೀ ಶ್ರೀ ಡಾ. ಮಾತೇ ಮುಕ್ತಾಂಬಿಕೆ ದೇವಿ, ದತ್ತಾತ್ರೇಯ ಆಶ್ರಮ ಹೊಸಕೋಟೆ ಹಾಗೂ ಶ್ರೀ ಗುರು ಮಾರ್ಕಾಂಡೇಶ್ವರ ಪದ್ಮಶಾಲಿ ಗುರುಮಠ ಸಂಸ್ಥಾನ ಹಾವೇರಿಯ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಪ್ರಭುಲಿಂಗಸ್ವಾಮಿ ಆಶೀರ್ವಚನಗೈಯಲಿದ್ದು, ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಖಿಲಭಾರತ ಪದ್ಮಶಾಲಿ ಸಂಘ ಹೈದರಾಬಾದಿನ ಅಧ್ಯಕ್ಷರಾದ ಕಂದಗಟ್ಲ ಸ್ವಾಮಿ, ಅಖಿಲಭಾರತ ಪದ್ಮಬ್ರಾಹ್ಮಣ ಪುರೋಹಿತ ಸಂಘದ ರಾಷ್ಟಾçಧ್ಯಕ್ಷರಾದ ಬ್ರಹ್ಮಶ್ರೀ ಬೋಜ್ಜನ್ನ ಪಂತುಲು, ಪ್ರಧಾನ ಕಾರ್ಯದರ್ಶಿ ಬ್ರಹ್ಮಶ್ರೀ ಪುಂಡಲೀಕಾನಂದ ತಾಟಿಪಾಮುಲು ಪಂತಲು, ಮಹಿಳಾ ವಿಭಾಗದ ರಾಷ್ಟಾçಧ್ಯಕ್ಷರಾದ ನೀಲ ಶ್ರೀಮತಿ ರಾಧಾ ಎಸ್., ಕರ್ನಾಟಕ ಪದ್ಮಶಾಲಿ ಸಂಘದ ಬಲಭದ್ರ ಎಸ್.ಜಗದೀಶ್, ಮಹಿಳಾ ನಿರ್ದೇಶಕರಾದ ಶ್ರೀಮತಿ ಉಮಾ ಎನ್. ಜಗದೀಶ್, ಕರ್ನಾಟಕ ಪದ್ಮಬ್ರಾಹ್ಮಣ ಪುರೋಹಿತ ಸಂಘದ ನಿಕಟಪೂರ್ವ ಅಧ್ಯಕ್ಷರಾದ ತರಣಿಕಂಟಿ ವಿಜಯಕುರ್ಮರವರು ಭಾಗವಹಿಸಿ ಪದ್ಮಶಾಲಿ ಜನಾಂಗದ ಹುಟ್ಟು ಬೆಳವಣಿಗೆ ಕುರಿತು ವಿಶೇಷ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸರ್ವಾಧ್ಯಕ್ಷರಾದ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರು 25 ಸಂವತ್ಸರಗಳ ಹಿಂದೆ ಕೇರಳದ ಪಯ್ಯನೂರಿನಲ್ಲಿ ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತçವನ್ನು ಅಭ್ಯಸಿಸಿ, ಚತುರ್ವೇಧವನ್ನು ಅಧ್ಯಯನ ಮಾಡಿ ಈಗಾಗಲೇ ದೇಶ ವಿದೇಶಗಳಲ್ಲಿ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಮದುವೆ, ಗೃಹಪ್ರವೇಶದಂತಹ ದೇವತಾ ಕಾರ್ಯದಲ್ಲಿ ಪೌರೋಹಿತ್ಯವನ್ನು ಮಾಡಿ ನಾಡಿನೆಲ್ಲಡೆ ಜನಾನುರಾಗಿಯಾಗಿದ್ದಾರೆ. ಈಗಾಗಲೇ 75 ಸಾವಿರಕ್ಕೂ ಮಿಕ್ಕಿ ನೂತನ ಹಾಗೂ ಹಳೆ ಮನೆಗಳ ವಾಸ್ತುವಿನ್ಯಾಸ, 2 ಲಕ್ಷಕ್ಕೂ ಮಿಕ್ಕಿ ಜಾತಕ ಪರಿಶೀಲನೆ ರಚನೆ ಮಾಡಿದ್ದಾರೆ.