ಅಂತಿಮವಾಗಿ ಜೆಡಿಎಸ್‌ಗೆ 3 ಸ್ಥಾನ ಫಿಕ್ಸ್ :ಮೈತ್ರಿ ಗೊಂದಲಕ್ಕೆ ತೆರೆ ಎಳೆದ ಬಿಜೆಪಿ ಹೈಕಮಾಂಡ್..!

Views: 119
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ & ಜೆಡಿಎಸ್‌ನ ನಡುವೆ ಮೈತ್ರಿ ವಿಚಾರವಾಗಿ ಭಾರಿ ಗೊಂದಲ ಏರ್ಪಟ್ಟಿತ್ತು. ಜೆಡಿಎಸ್ ಪಾಲಿಗೆ ಬರೀ 2 ಸ್ಥಾನ ಸಿಗಲಿದೆ ಅಂತಾ ಹೇಳಲಾಗಿತ್ತು. ಇದೇ ಕಾರಣಕ್ಕೆ ಜೆಡಿಎಸ್ ವರಿಷ್ಠ ಹಾಗೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಗರಂ ಆಗಿದ್ದರು. ಆದರೆ ಇದೀಗ ಜೆಡಿಎಸ್ ತಣಿಸುವ ಕೆಲಸ ಮಾಡಿದೆ ಬಿಜೆಪಿ ಹೈಕಮಾಂಡ್!
ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ವರ್ಕೌಟ್ ಆಗಲ್ಲ ಎಂಬ ಆರೋಪಗಳು ಕೂಡ ಕೇಳಿಬಂದವು. ಇದು ಬಿಜೆಪಿ ಕೇಂದ್ರ ನಾಯಕರಿಗೆ ಕೂಡ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೀಗಾಗಿಯೇ ಬಿಜೆಪಿಗೆ ಕನ್ಫ್ಯೂಸ್ ಆಗಿ, ಜೆಡಿಎಸ್ ಪಕ್ಷಕ್ಕೆ ಎಷ್ಟು ಸ್ಥಾನ ಕೊಡಬೇಕು? ಅನ್ನೋದು ಗೊತ್ತಾಗಲಿಲ್ಲ. ಆದರೆ ಅಂತಿಮವಾಗಿ ಜೆಡಿಎಸ್‌ಗೆ 3 ಸ್ಥಾನ ಈಗ ಫಿಕ್ಸ್ ಆಗಿದೆ.
ಈ ಬಾರಿ ಜೆಡಿಎಸ್ ಜೊತೆ ಕೈಜೋಡಿಸಿದರೆ ಕರ್ನಾಟಕದಲ್ಲಿ ಭರ್ಜರಿ ಗೆಲುವು ಸಾಧಿಸೋಕೆ ಸಾಧ್ಯ ಎಂಬ ಲೆಕ್ಕಾಚಾರ ಹಾಕಿಕೊಂಡ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆ ಭರ್ಜರಿ ದೋಸ್ತಿ ಮಾಡಿಕೊಂಡಿದೆ. ಆದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿದ್ದು ಇದೇ ಕಾರಣಕ್ಕೆ, ಹಳೇ ಮೈಸೂರಿನಲ್ಲಿ ಹೆಚ್ಚಿನ ಸ್ಥಾನ ಬೇಕು ಎಂದು ಜೆಡಿಎಸ್ ಭಾರಿ ಹಠ ಹಿಡಿದಿದ್ದರು. ಇದು ಬಿಜೆಪಿ ಹೈಕಮಾಂಡ್‌ಗೆ ತಲೆನೋವು ತರಿಸಿತ್ತು. ಯಾಕಂದ್ರೆ, ಈ ಹಿಂದಿನ 2019ರ ಚುನಾವಣೆಯಲ್ಲಿ ಜೆಡಿಎಸ್ ಹಾಸನ ಮಾತ್ರ ಗೆದ್ದಿತ್ತು. ಹೀಗಾಗಿ ಕೋಲಾರ ಮತ್ತು ಮಂಡ್ಯ ಕ್ಷೇತ್ರಗಳನ್ನು ತಮ್ಮ ತೆಕ್ಕೆಗೆ ಪಡೆಯಲು ಜೆಡಿಎಸ್ ಪಣತೊಟ್ಟಿತ್ತು
ಹೀಗೆ ಇಬ್ಬರ ನಡುವಿನ ತಿಕ್ಕಾಟ ಈಗ ಬಗೆಹರಿದಿದ್ದು, ಕೊನೆಗೂ ಹಾಸನ & ಮಂಡ್ಯ ಸೇರಿ ಕೋಲಾರ ಲೋಕಸಭಾ ಕ್ಷೇತ್ರವನ್ನ ಕೂಡ ಜೆಡಿಎಸ್ ಪಾಲಿಗೆ ಬಿಟ್ಟುಕೊಡಲು ಈಗ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ. ಹೀಗಾಗಿ ದಳಪತಿಗಳು ಖುಷ್ ಆಗಿದ್ದು, ಜೆಡಿಎಸ್ ಜತೆ ಯಾವುದೇ ಕಿರಿಕ್ ಇಲ್ಲದೆ ಚುನಾವಣೆಗೆ ಎಂಟ್ರಿ ಪಡೆಯಲು ಬಿಜೆಪಿ ವರಿಷ್ಠರು ಸಿದ್ಧರಾಗಿದ್ದಾರೆ. ಈ ಮೂಲಕ ಕಳೆದ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಜೆಡಿಎಸ್ ಈ ಬಾರಿ, ಮಂಡ್ಯ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯಲು ಯಶಸ್ವಿಯಾಗಿದ್ದಾರೆ.